Home ಜಿಲ್ಲೆ ಬೆಂಗಳೂರು ಬಾಲಕಾರ್ಮಿಕರಿಬ್ಬರ ಬಿಡುಗಡೆ

ಬಾಲಕಾರ್ಮಿಕರಿಬ್ಬರ ಬಿಡುಗಡೆ

ಕೋಲಾರ, ಜು.೩- ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ದಿನಾಂಕ:೨೧.೦೪.೨೦೨೬ರಂದು ಎನ್.ಕೆ.ಆರ್., ಬ್ರಿಕ್ಸ್ (ಎನ್.ಎ.ಐ) ಮೊಹಮ್ಮದ್ ಇಬ್ರಾಹಿಂ ಖಾನ್ ಬಿನ್ ಅನ್ವರ್ ಖಾನ್, ರಾಮೇನಹಳ್ಳಿ, ಶಿವಾರಪಟ್ಟಣ ರಸ್ತೆ, ಮಾಲೂರು ಸಂಸ್ಥೆಗೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಜಂಟಿಯಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಓರಿಸ್ಸಾ ರಾಜ್ಯದ ಒಟ್ಟು ೦೨ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ.


ಮಾಲೂರು ಕಾರ್ಮಿಕ ನಿರೀಕ್ಷಕರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅನ್ವರ್ ಖಾನ್ ಬಿನ್ ಅಬ್ದುಲ್ ಅಜೀಜ್ ಖಾನ್ ಮಾಲೀಕರು ಮತ್ತು ಮೊಹಮ್ಮದ್ ಇಬ್ರಾಹಿಂ ಖಾನ್ ಬಿನ್ ಅನ್ವರ್ ಖಾನ್, ಮಾಲೀಕರ ಮಗ ಮತ್ತು ಬ್ರಿಕ್ಸ್ ಪ್ಯಾಕ್ಟರಿಯ ಉಸ್ತುವಾರಿದಾರರು, ಎನ್.ಕೆ.ಆರ್., ಬ್ರಿಕ್ಸ್ (ಎನ್.ಎ.ಐ), ರಾಮೇನಹಳ್ಳಿ, ಶಿವಾರಪಟ್ಟಣ ರಸ್ತೆ, ಮಾಲೂರು ಇವರ ವಿರುದ್ದ ಮೊಕ್ಕದ್ದಮೆ ದಾಖಲಿಸಿದ್ದು, ಸದರಿ ಪ್ರಕರಣದಲ್ಲಿ ದಿನಾಂಕ:೨೫-೦೬-೨೦೨೬ ರಂದು ಜೆಎಂಎಫ್‌ಸಿ ನ್ಯಾಯಾಲಯವು ಮಾಲೀಕರಿಗೆ ರೂ.೪೦೦೦೦ಗಳ ದಂಡ ವಿದಿಸಿರುತ್ತಾರೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.