Home ಜಿಲ್ಲೆ ಬೆಂಗಳೂರು ಮುನೇಶ್ವರ ಸ್ವಾಮಿ-ಅಕ್ಕಯಮ್ಮ ತಾಯಿ ದೇವಾಲಯಗಳ ಜೀರ್ಣೋದ್ಧಾರ

ಮುನೇಶ್ವರ ಸ್ವಾಮಿ-ಅಕ್ಕಯಮ್ಮ ತಾಯಿ ದೇವಾಲಯಗಳ ಜೀರ್ಣೋದ್ಧಾರ

ಚಿಕ್ಕಬಳ್ಳಾಪುರ.ಸೆ.೦೯ -ತಾಲೂಕಿನ ಕೊಂಡೇನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರುವ ಗೊಲ್ಲಪಡೇ ಗ್ರಾಮದ ಮುನೇಶ್ವರ ಸ್ವಾಮಿ ಮತ್ತು ಅಕ್ಕಯಮ್ಮ ದೇವಿ ದೇವಸ್ಥಾನಗಳು ಅನಾದಿ ಕಾಲದಿಂದಲೂ ನೆಲೆಗೊಂಡಿರುವ ಪವಿತ್ರ ಕ್ಷೇತ್ರಗಳಾಗಿದೆ.


ಈ ಹಿಂದೆ ಇದೇ ಸ್ಥಳದಲ್ಲಿ ಚಿಕ್ಕ ಗುಡಿಗಳು ಮಾತ್ರ ಇದ್ದವು, ಈಗ ಭಕ್ತಾಧಿಗಳು ಹಾಗೂ ದಾನಿಗಳ ಉದಾರ ಸಹಾಯದಿಂದ ಈ ಎರಡೂ ದೇವಸ್ಥಾನಗಳನ್ನು ಬೃಹತ್ ಮಟ್ಟದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಣ್ಣ (ಕೊಂಡೇನಹಳ್ಳಿ) ತಿಳಿಸಿದರು.


ದೇವಾಲಯದ ಜೀರ್ಣೋದ್ಧಾರದ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಅವರು, ಈ ದೇವಸ್ಥಾನಗಳಿಗೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ಪ್ರತಿದಿನ ಐನೂರಕ್ಕೂ ಹೆಚ್ಚು ಭಕ್ತರು ದೂರದ ಊರುಗಳಿಂದ ಆಗಮಿಸುತ್ತಾರೆ. ದೂರದ ಊರು ಅಂದರೆ ಸುಮಾರು ೨೦೦-೩೦೦ ಕಿ.ಮೀ ದೂರದಿಂದ ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಇಲ್ಲಿಯೇ ಅಡುಗೆ ತಯಾರಿಸಲು ಮತ್ತು ೧೦೦-೨೦೦ ಜನರಿಗೆ ಏಕಕಾಲದಲ್ಲಿ ಊಟ ಮಾಡಲು ಬೃಹತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ,ಇದು ಭಕ್ತಾದಿಗಳಿಗೆ ಅತ್ಯಂತ ಅನುಕೂಲಕರವಾಗಿ ರೂಪುಗೊಂಡಿದೆ ಎಂದು ತಿಳಿಸಿದರು.


ಇನ್ನೂ ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ಹೋಮ ಹವನ ನಡೆಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಪೂಜೆಯನ್ನು ನೆರವೇರಿಸಿ, ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.


ಈ ಸಂದರ್ಭದಲ್ಲಿ ಮಂಜುನಾಥ್ (ಕೆಇಬಿ ಸದಸ್ಯರು),ಎಂಪಿಸಿಎಸ್ ಮಾಜಿ ಅಧ್ಯಕ್ಷ ಕೆ.ಜಿ. ರಾಮಾಂಜಿನಯ್ಯ, ಕೊಳವನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಚೆನ್ನಕೇಶವಪ್ಪ, ಎಂಪಿಸಿಎಸ್ ಮಾಜಿ ಸದಸ್ಯರಾದ ನಾರಾಯಣಸ್ವಾಮಿ ಬಿ.ಎಂ., ಕೊಂಡೇನಹಳ್ಳಿ ಮುರಳಿ. ಕೆ.ಪಿ., ಪದ್ಮಾವತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಗ್ರಾಮಸ್ಥರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.