Home ಜಿಲ್ಲೆ ತುಮಕೂರು ಉತ್ತಮ ಆರೋಗ್ಯಕ್ಕೆ ನಿರಂತರ ಯೋಗಾಭ್ಯಾಸ ಅಗತ್ಯ

ಉತ್ತಮ ಆರೋಗ್ಯಕ್ಕೆ ನಿರಂತರ ಯೋಗಾಭ್ಯಾಸ ಅಗತ್ಯ

ಕುಣಿಗಲ್, ಜೂ. ೨೩- ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹುಲಿಯೂರುದುರ್ಗ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯ ಹಾಗೂ ಮುಖ್ಯ ಶಿಕ್ಷಕ ಲಕ್ಷ್ಮಿನಾರಾಯಣ ಹೇಳಿದರು.


ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಮನುಷ್ಯರು ದೈಹಿಕ, ಮಾನಸಿಕ ಒತ್ತಡಗಳು ಸೇರಿದಂತೆ ಅನೇಕ ಕಾರಣಗಳಿಂದ ಆರೋಗ್ಯಸಮಸ್ಯೆಗಳಿಂದ ಬಳಲುತ್ತಿದ್ದು, ಅತಿಯಾದ ಮೊಬೈಲ್ ಸೇರಿದಂತೆ ಅನೇಕ ಒತ್ತಡಗಳಿಗೊಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಇವುಗಳಿಗೆ ಉತ್ತಮ ಪರಿಹಾರ ದಿನನಿತ್ಯ ಪ್ರತಿಯೊಬ್ಬರೂ ಯೋಗಾಭ್ಯಾಸ ಕೈಗೊಳ್ಳುವುದರಿಂದ ಮಾನಸಿಕ, ದೈಹಿಕ ಒತ್ತಡಗಳಿಂದ ಹೊರ ಬಂದು ಉತ್ತಮ ಆರೋಗ್ಯವಂತರಾಗಿರಬಹುದು ಎಂದರು.


ಈ ಸಂದರ್ಭದಲ್ಲಿ ಹಿರಿಯ ಯೋಗ ಬಂಧುಗಳಾದ ಪದ್ಮಚರಣ್, ಸತ್ಯಮೂರ್ತಿ, ಮಹದೇವಪ್ಪ, ಹಿರಿಯ ಯೋಗ ಶಿಕ್ಷಕಿ ಎಂ.ಎಸ್.ಗಂಗಮ್ಮ, ಪ್ರಸನ್ನ, ವನಿತಾರಾಣಿ, ನಳಿನ, ಸುನಿಲ್ ರಂಜಿತಾ, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.