
ಹುಬ್ಬಳ್ಳಿ,ಜೂ೨೪: ಇಲ್ಲಿನ ರಾಯಾಪುರದಲ್ಲಿರುವ ಇಸ್ಕಾನ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಧಾ ಗೋವಿಂದ ದೇವಜಿ ಮಂದಿರದಲ್ಲಿ ಪವಿತ್ರ ಪ್ರಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭವು ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಸೋಮವಾರ ಸಂಜೆ ವೈದಿಕ ಮಂತ್ರೋಚ್ಚಾರಣೆ, ಭಕ್ತಿಪೂರ್ಣ ಕೀರ್ತನೆಗಳು ಹಾಗೂ ಪೂಜ್ಯ ಆಧ್ಯಾತ್ಮಿಕ ನಾಯಕರು, ಗಣ್ಯರು, ಭಕ್ತರು ಮತ್ತು ವಿವಿಧ ಭಾಗಗಳಿಂದ ಆಗಮಿಸಿದ ಶುಭ ಚಿಂತಕರ ಸಮ್ಮುಖದಲ್ಲಿ ದೇವರ ಪ್ರತಿಷ್ಠಾಪನಾ ವಿಧಿ-ವಿಧಾನಗಳ ಮೂಲಕ ಅತ್ಯಂತ ವೈಭವದಿಂದ ನೆರವೇರಿದವು.
ಉದ್ಯಮಿಗಳಾದ ಆನಂದ ಸಂಕೇಶ್ವರ, ಡಾ. ಜಿ. ವಿ.ಎಸ್.ವಿ. ಪ್ರಸಾದ್, ಮೋಹನದಾಸ ಪೈ ಸೇರಿದಂತೆ ಹಲವರು ಈ ಭವ್ಯ ಆಧ್ಯಾತ್ಮಿಕ ಕೇಂದ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದರಿಂದ ಅಭಿನಂದಿಸಲಾಯಿತು.
ಈ ಮಂದಿರವು ಆಧ್ಯಾತ್ಮಿಕ ಶಿಕ್ಷಣ, ಸಾಂಸ್ಕöÈತಿಕ ಸಂರಕ್ಷಣೆ, ಸಮುದಾಯ ಕಲ್ಯಾಣ ಹಾಗೂ ಭಗವದ್ಗೀತೆಯ ಶಾಶ್ವತ ಸಂದೇಶಗಳ ಪ್ರಸಾರದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.


























