Home ಜಿಲ್ಲೆ ಮಾನಸಿಕ ಶಾಂತತೆ ಕಾಪಾಡಿಕೊಳ್ಳಲು ಯೋಗ ಅಗತ್ಯ

ಮಾನಸಿಕ ಶಾಂತತೆ ಕಾಪಾಡಿಕೊಳ್ಳಲು ಯೋಗ ಅಗತ್ಯ


ಚನ್ನಮ್ಮನ ಕಿತ್ತೂರು,ಜೂ.೨೪:
ಇಂದಿನ ಒತ್ತಡದ ಆಧುನಿಕ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ದೈಹಿಕ ದೃಡತೆ ಹಾಗೂ ಮಾನಸಿಕ ಶಾಂತತೆಯನ್ನು ಕಾಪಾಡಿಕೊಳ್ಳಲು ಯೋಗ ಅಗತ್ಯವೆಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ತಾಲೂಕಿನ ಎಂಕೆಹುಬ್ಬಳ್ಳಿ ಮಲಪ್ರಭಾ ನದಿ ತೀರದ ಆಶ್ವಶ್ಥ ಲಕ್ಷಿ÷್ಮÃ-ನರಸಿಂಹ ದೇವಸ್ಥಾನ ಆವರಣದಲ್ಲಿ ಅಂತರರಾಷ್ಟಿçÃಯ ಯೋಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗ ಮತ್ತು ಧ್ಯಾನ ರೋಗಗಳಿಗೆ ರಾಮ ಬಾಣವಿದ್ದಂತೆ ಆರೋಗ್ಯಯುತ ಬದುಕಿಗೆ ಯೋಗ ಉತ್ತಮ ಔಷಧಿಯಾಗಿದ್ದು ಪ್ರತಿಯೊಬ್ಬರು ಪ್ರತಿನಿತ್ಯ ಯೋಗ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.


ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮುಂದಾಳ್ವದಲ್ಲಿ ಕಾರ್ಯಕ್ರಮ ಜರುಗಿತು. ಮಾತನಾಡಿ ಯೋಗವು ಕೇವಲ ಒಂದು ದಿನದ ಆಚರಣೆಯಾಗದೆ ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದೃಢ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಯೋಗ ಮಾಡಬೇಕು. ಇದನ್ನೆ ಮಾಡುವುದರಿಂದ ಶರೀರದ ಎಲ್ಲ ಅವಯವಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿ ಆರೋಗ್ಯವಂತರಾಗಿರಲು ಸಹಾಯವಾಗುತ್ತದೆ. ಯೋಗ ಶಿಕ್ಷಣ ನಮಗೆ ಸದೃಢ ಶರೀರದೊಂದಿಗೆ ಮಾನಸಿಕ ನೆಮ್ಮದಿ ಹೊಂದಲು ಸಹಕಾರಿಯಾಗಿದೆ ಮೋಬೈಲ್ ಬಳಕೆ ಕಡಿಮೆ ಮಾಡಿ ಪ್ರತಿದಿನ ಯೋಗಾಭ್ಯಾಸ ಕೈಗೊಂಡರೆ ಈ ಅಂತರರಾಷ್ಟಿçÃಯ ಯೋಗ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಸಂದೀಪ ದೇಶಪಾಂಡೆ, ನಿಂಗಪ್ಪ ಚೌಡಣ್ಣವರ, ಉಳವಪ್ಪ ಉಳ್ಳಾಗಡ್ಡಿ, ನಾಗರಾಜ ದುರಗದ, ಮಹಾಂತೇಶ ಚಿನ್ನಪ್ಪಗೌಡರ, ಬಸವರಾಜ ಗಡೆನ್ನವರ, ಕಾದ್ರೋಳ್ಳಿ ರಾಜುಗೌಡ ಪಾಟೀಲ, ಅಮರಾಪೂರ ಸಿದ್ದನಗೌಡ ಪಾಟೀಲ, ಸಿದ್ದು ಬೋಳನ್ನವರ, ಅನಿಲ್ದೇವ ನೇಸರಗಿ, ನಂದೀಶ ಶಹಾಪೂರಮಠ, ಸಿದ್ರಾಮ ಸೊಲಬೈನವರ, ರಾಜು ನಡುವಿನಮನಿ, ಮಹಾಂತೇಶ ಗಾಣಗಿ, ವಿಠ್ಠಲ ಹೈಬತ್ತಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರಿದ್ದರು.