Home ಜಿಲ್ಲೆ ಕಲಬುರಗಿ ವೈಚಾರಿಕತೆಯ ಚಿಂತಕ, ಮೇರು ಸಾಹಿತಿ ದೇವನೂರು ಮಹಾದೇವ

ವೈಚಾರಿಕತೆಯ ಚಿಂತಕ, ಮೇರು ಸಾಹಿತಿ ದೇವನೂರು ಮಹಾದೇವ

ಕಲಬುರಗಿ :ಜೂ.10: ದೇವನೂರು ಮಾಹದೇವ ಅವರು ವೈಚಾರಿಕ ಬರಹಗಾರ, ಚಿಂತಕ, ಹೋರಾಟಗಾರ. ಗಾಂಧಿ,
ಕುಸುಮಬಾಲೆ ಅವರ ಪ್ರಮುಖ ಕಾದಂಬರಿ. ‘ಪಂಚಮ’ ಪತ್ರಿಕೆಯ ಮೂಲಕ ಜನ ಜಾಗೃತಿ ಮೂಡಿಸಿದವರು.ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷರಾಗಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ, ಡಾ.ಬಿ.ಆರ್.ಅಂಬೇಡ್ಕರ್ ಸಾಹಿತ್ಯ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ “ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ”ಯಲ್ಲಿ ” ಬಸವೇಶ್ವರ ಸಮಾಜ ಸೇವಾ ಬಳಗ”ದ ವತಿಯಿಂದ ಜರುಗಿದ “ಡಾ.ದೇವನೂರು ಮಹಾದೇವರ 78ನೇ ಜನ್ಮದಿನಾಚರಣೆ”ಯ ಪ್ರಯುಕ್ತ ” ಡಾ.ದೇವನೂರರ ಬದುಕು-ಬರಹ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಲ್ಲಮಪ್ರಭು ಪ್ರಶಸ್ತಿ, ಬೋಧಿವೃಕ್ಷ ಪ್ತಶಸ್ತಿ,ವಿ,ಎಂ.ಇನಾಂದಾರ್ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಕುವೆಂಪು ರಾಷ್ಟ್ರೀಯ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹೀಗೆ ಅನೇಕ ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕ ದಿನೇಶ್ ಮಿಶ್ರಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.