ಕೆಜಿಎಫ್.ಜು,೩:ಮತದಾರರ ಪಟ್ಟಿಗಳ ವಿಶೇಷ ತೀರ ಪರಿಷ್ಕರಣೆ ಎಂಬುದು ಚುನಾವಣಾ ದಾಖಲೆಗಳನ್ನು ನಿವೀಕರಿಸಲು ಮತ್ತು ಧೃಡೀಕರಿಸಲು ಭಾರತೀಯ ಚುನಾವಣಾ ಆಯೋಗ ನಡೆಸುವ ಸಮಗ್ರ ಮತದಾರರ ಪರಿಶೀಲಾನ ವ್ಯಾಯಾಮವಾಗಿದೆ ಎಂದು ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮುನಿರತ್ಮಂ ಹೇಳಿದರು.
ಸಾರ್ವಜನಿಕರಲ್ಲಿ ಎಸ್‌ಐಆರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಘಟ್ಟಮಾದಮಂಗಲ ಗ್ರಾಮದಲ್ಲಿ ರ್‍ಯಾಲಿಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಮತ್ತು ಶಾಸನ ಬದ್ದ ಅಧಿಕಾರಿಗಳ ಅಡಿಯಲ್ಲಿ ನಡೆಸುವ ಮತದಾರರ ಪಟ್ಟಿಗಳ ದೊಡ್ಡ ಪ್ರಮಾಣದ ತೀವ್ರವಾದ ಪರಿಷ್ಕರಣೆಯನ್ನು ಎಸ್‌ಐಆರ್ ಸೂಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಿಎಲ್‌ಒ ಕೃಷ್ಣಮೂರ್ತಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ರಾಜೇಶ್ , ನಾಗರಾಜ್ ಹಾಗೂ ಇತರರು ಹಾಜರಿದ್ದರು.
































