Home ಜಿಲ್ಲೆ ತುಮಕೂರು ರಾಜ್ಯೋತ್ಸವ: ಕ್ರೀಡಾಪಟುಗೆ ಗೌರವಾರ್ಪಣೆ

ರಾಜ್ಯೋತ್ಸವ: ಕ್ರೀಡಾಪಟುಗೆ ಗೌರವಾರ್ಪಣೆ

ತುಮಕೂರು, ನ. ೨೯- ಕೀರ್ತನ ಕ್ರಿಯೇಟಿವ್ ಫೌಂಡೇಶನ್ ಟ್ರಸ್ಟ್ ವತಿಯಿಂದ ನಗರದಲ್ಲಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.


ಇದೇ ವೇಳೆ ಕ್ರೀಡಾಕೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾತರಬೇತುದಾರ ವೈ.ರಮೇಶ್ ಅವರನ್ನು ಗೌರವಿಸಲಾಯಿತು.


ರಾಷ್ಟ್ರಮಟ್ಟದ ಕ್ರೀಡಾ ತರಬೇತುದಾರರಾಗಿ ಹಾಗೂ ಖೇಲೋ ಇಂಡಿಯಾ ತರಬೇತುದಾರರಾಗಿ ಸೇವೆ ಸಲ್ಲಿಸಿರುವ ರಮೇಶ್ ಅವರು ಹಲವಾರು ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ಮಾರ್ಗದರ್ಶನದ ೧೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಸ್ಥಾನಮಾನ ಪಡೆದಿದ್ದಾರೆ. ಕ್ರೀಡೆಯ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಇವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಕೀರ್ತನ ಕ್ರಿಯೇಟೀವ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ವೈ.ಆರ್.ಲಕ್ಷ್ಮೀಶ್ ತಿಳಿಸಿದರು.


ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ನಾಗರತ್ನ ಲಕ್ಷ್ಮೀಶ್, ಸೇರಿದಂತೆ ವಿವಿಧ ಮುಖಂಡರು, ಮಕ್ಕಳು ಭಾಗವಹಿಸಿದ್ದರು.