
ಮುಂಬೈ,ನ.28-ನಿನ್ನೆ ತೆರೆಕಂಡ ಎರಡು ಪ್ರಮುಖ ಬಾಲಿವುಡ್ ಚಿತ್ರಗಳಾದ ಆಯುಷ್ಮಾನ್ ಖುರಾನಾ ಅವರ ‘ಯೇ ಪ್ರೇಮ್ ಮೋಲ್ ಲಿಯಾ’ ಮತ್ತು ಇಮ್ರಾನ್ ಹಶ್ಮಿ ಅವರ ‘ಗನ್ಮಾಸ್ಟರ್ ಜಿ9’ ನಡುವೆ ಬಾಕ್ಸ್ ಆಫೀಸ್ನಲ್ಲಿ ತೀವ್ರ ಪೈಪೆÇೀಟಿ ಏರ್ಪಟ್ಟಿದೆ.
ಸಕ್ನಿಲ್ಕ್ ವರದಿಯ ಪ್ರಕಾರ, ಸೂರಜ್ ಬರ್ಜಾತ್ಯಾ ನಿರ್ದೇಶನದ ಮತ್ತು ಶರ್ವರಿ ವಾಘ್, ಅನುಪಮ್ ಖೇರ್, ಸೀಮಾ ಪಹ್ವಾ, ಸುಪ್ರಿಯಾ ಪಾಠಕ್, ಸ್ವಾನಂದ್ ಕಿರ್ಕಿರೆ, ರಾಜೇಶ್ ಕುಮಾರ್ ನಟಿಸಿರುವ ರೋಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ‘ಯೇ ಪ್ರೇಮ್ ಮೋಲ್ ಲಿಯಾ’ ಮೊದಲ ದಿನ 7,251 ಪ್ರದರ್ಶನಗಳು ಮತ್ತು ಸುಮಾರು 1,88,726 ಟಿಕೆಟ್ ಮಾರಾಟದೊಂದಿಗೆ ಭಾರತದಲ್ಲಿ 4 ಕೋಟಿ ನಿವ್ವಳ (4.70 ಕೋಟಿ ಒಟ್ಟು) ಗಳಿಕೆ ಕಂಡಿದೆ.
ಮತ್ತೊಂದೆಡೆ, ಆದಿತ್ಯ ದತ್ ನಿರ್ದೇಶನದ, ಜೆನೆಲಿಯಾ ಡಿಸೋಜಾ, ಅಪರ್ಶಕ್ತಿ ಖುರಾನಾ, ಅವನೀತ್ ಕೌರ್, ಇನಾಯತ್ ವರ್ಮಾ ಅಭಿನಯದ ಹಾಗೂ 2 ಗಂಟೆ 22 ನಿಮಿಷಗಳ ಅವಧಿಯ ‘ಎ’ ಪ್ರಮಾಣಪತ್ರ ಪಡೆದ ಆಕ್ಷನ್ ಥ್ರಿಲ್ಲರ್ ‘ಗನ್ಮಾಸ್ಟರ್ ಜಿ9’ (ಕುಟುಂಬವನ್ನು ಉಳಿಸಲು ತನ್ನ ಅಪಾಯಕಾರಿ ಭೂತಕಾಲಕ್ಕೆ ಮರಳಿ ನಿರ್ದಯ ಗ್ಯಾಂಗ್ ಎದುರಿಸುವ ಡೈರಿ ರೈತನ ಕಥೆ) 7,740 ಹೆಚ್ಚು ಪ್ರದರ್ಶನಗಳನ್ನು ಪಡೆದಿದ್ದರೂ ಸಹ 35 ಲಕ್ಷ ಹಿನ್ನಡೆಯೊಂದಿಗೆ ಭಾರತದಲ್ಲಿ 3.65 ಕೋಟಿ ನಿವ್ವಳ (4.30 ಕೋಟಿ ಒಟ್ಟು) ಕಲೆಕ್ಷನ್ ಮಾಡಿದೆ; ಆದಾಗ್ಯೂ ಈ ಎರಡೂ ಚಿತ್ರಗಳ ಅಂತಿಮ ಯಶಸ್ಸು ವಾರಾಂತ್ಯದ ಗಳಿಕೆ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಅವಲಂಬಿಸಿದೆ.
ಏತನ್ಮಧ್ಯೆ, ರಣಬೀರ್ ಕಪೂರ್ ಅವರ `ರಾಮಾಯಣ’ ಚಿತ್ರವು ಮೂರು ವಾರಗಳನ್ನು ಪೂರೈಸಿ 23ನೇ ದಿನವೂ ಭಾರತದಲ್ಲಿ 8.45 ಕೋಟಿ ನಿವ್ವಳ ಗಳಿಸುವ ಮೂಲಕ ತನ್ನ ಬಲವಾದ ಹಿಡಿತವನ್ನು ಮುಂದುವರಿಸಿದ್ದು, ಚಿತ್ರದ ಭಾರತದ ನಿವ್ವಳ ಗಳಿಕೆ 1,000.55 ಕೋಟಿ (ಭಾರತದ ಒಟ್ಟು ಗಳಿಕೆ 1,195.10 ಕೋಟಿ) ಹಾಗೂ ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 1,790.10 ಕೋಟಿಗೆ ತಲುಪುವ ಮೂಲಕ 18 ಬಿಲಿಯನ್ ಗಡಿಯ ಸನಿಹದಲ್ಲಿದೆ.




















