
ನವಲಗುಂದ,ನ.೧: ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಮೀರಿದ ಶ್ರೀಮಂತ ಸಾಹಿತ್ಯಿಕ ಪರಂಪರೆಯಿದೆ. ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಂತಾದ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ ವಾದಿರಾಜ ಇನಾಮದಾರ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ ಎಂ ಬಿ ಬಾಗಡಿ ಮಾತನಾಡಿ ರಾಷ್ಟçಕವಿ ಕುವೆಂಪು ಅವರು ಸಾರಿದ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂಬ ಆಶಯವು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಸದಾ ಪ್ರತಿಧ್ವನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮೊದಲು ಎಲ್ಲ ಸಿಬ್ಬಂದಿ ವರ್ಗದವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ಶ್ರೀನಿವಾಸರಡ್ಡಿ ಹರ್ಲಾಪುರ ಕಾರ್ಯಕ್ರಮ ನಿರೂಪಣೆ ಮಾಡಿ ಸರ್ವರನ್ನೂ ಸ್ವಾಗತಿಸಿದರು. ಸಂತೋಷ ಹುಬ್ಬಳ್ಳಿ ಪ್ರಾಸ್ತವಿಕವಾಗಿ ಮಾತನಾಡಿದರು. ರಮೇಶ ಚವ್ಹಾಣ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರೊ ಆಯ್ ಬಿ ಸಾತಿಹಾಳ, ಪ್ರಸನ್ನ ಪಂಢರಿ, ನಾಗರತ್ನ ಕುರ್ಡೇಕರ, ಸವಿತಾ ಚಿಕ್ಕಣ್ಣವರ, ಗಣೇಶ ಧೋoಗಡಿ, ಶ್ರೀಧರ ಲೋನಕರ, ಸಮೀರ ನಧಾಪ, ಪ್ರತಿಭಾ ನಿಡಗುಂದಿ,ಡಾ ಗುಳಗುಂದಿ, ರವಿ ಬ್ಯಾಹಟ್ಟಿ, ನಾಗಪ್ಪ ಸುರಳಿಕೇರಿ, ನಿಂಗಪ್ಪ ವಂಕನ್ನವರ, ಜೋತಿಭಾ ದೊಡಮನಿ, ರಾಚನಗೌಡ ಚಿನ್ನಪ್ಪಗೌಡರ, ಭಾರತಿ ಭೋವಿ, ಮಂಜುನಾಥ ಮಂಗೋಣಿ, ಯಶೋದಾ ಬಿ, ನಾಗತೇಜ ಪಿ, ಕಾಲವಾಡ, ನಾಗೇಶ, ಬಾಬು ಮುಂತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.























