Home ಜಿಲ್ಲೆ ಕಲಬುರಗಿ ರ್ಯಾಗಿಂಗ ಶಿಕ್ಷಾರ್ಹ ಅಪರಾಧ : ಅಶಫಾಕ್ ಅಹ್ಮದ

ರ್ಯಾಗಿಂಗ ಶಿಕ್ಷಾರ್ಹ ಅಪರಾಧ : ಅಶಫಾಕ್ ಅಹ್ಮದ

ಕಲಬುರಗಿ:ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ. ಒಳ್ಳೆಯ ನಡತೆ, ನಿರ್ಧಾರ ತೆ ಗೆದುಕೊಳ್ಳುವ ಸಮಯ. ರಾಗಿಂಗಗೆ ಒಳಪಟ್ಟು ಮಾನಸಿಕ ವೇತನೆಗೆ ಒಳಗೊಂಡು ಭಯ ಮನೆ ಮಾಡಿ ಭವಿಷ್ಯ ಹಾಳಾಗುತ್ತದೆ. ಸೀನಿಯರ ವಿದ್ಯಾರ್ಥಿಗಳು ಕೂಡ ತಮ್ಮ ಭವಿಷ್ಯವನ್ನು ಕೆಡಿಸಿಕೊಳ್ಳುತ್ತಾರೆ. ರಾಗಿಂಗ ಒಂದು ಶಿ ಕ್ಷಾರ್ಹ್ ಅಪರಾಧ. ಅಡ್ಮಿಷನ ಕ್ಯಾನ್ಸಲ ಆಗಬಹುದು ಎಂದು ಕೆಬಿಎನ ವಿವಿಯ ಸಮ ಉಪಕುಲಪತಿ ಪೆÇ್ರ ಅಶಫಾಕ ಅಹ್ಮದ ಹೇಳಿದರು. ಅವರು ಬುಧವಾರ ವಿವಿಯ ಅನಟೋಮಿ ಹಾಲ್ ನಲ್ಲಿ ನಡೆದ ಆಂಟಿ ರಾಗಿಂಗ ವೀಕ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇನ್ನೊರ್ವ್ ಅತಿಥಿ ವಿವಿಯ ರಿಜಿಸ್ಟ್ರಾರ ಮಿರ ವಿಲಾಯತ ಇವರು ಮಾತನಾಡುತ್ತ, ಕೆಬಿಎನ ವಿವಿಯಲ್ಲಿ ರಾಗಿಂಗ ನಡೆಯುವುದಿಲ್ಲ. ಯಾವುದೇ ವಿದ್ಯಾರ್ಥಿಗೆ ಮಾನಸಿಕ್ ಕಿರುಕುಳ, ತಮಾಷೆಯ ಹೆಸರಲ್ಲಿ ಅವಮಾನ ಮಾಡಲಾಗುವುದಿಲ್ಲ. ಜೀವನದ ಜೊತೆ ಚೆಲ್ಲಾಟ ಆಡಬೇಡಿ. ಅಕಸ್ಮಾತ ಅಂತಹ ಘಟನೆಗಳು ಕಂಡು ಬಂದಲ್ಲಿ ಆಂಟಿ ರಾಗಿಂಗ ಕಮಿಟಿ ಮ್ಯಾನೇಜಮೆಂಟ ಗಮನಕ್ಕೆ ತರಬೇಕು. ಅವರಿಗೆ ಕಾನೂನು ತಕ್ಕ ಶಿಕ್ಷೆ ಯಾಗುತ್ತದೆ ಎಂದರು. ಡಿ. ಮೌನವೇ ಕಾರಣವಾಗಬಹುದು. ವಿದ್ಯಾರ್ಥಿಗಳು ಕೂಡ ಸಮಿತಿಯ ಸದಸ್ಯರುಗಳ ಗಮನಕ್ಕೆ ತನ್ನಿ ಎಂದರು

ಅಶ್ವತಿ ವಿದ್ಯಾರ್ಥಿ ಕಲ್ಯಾಣ ಕೌನ್ಸಲರ ರಾಗಿಂಗ ಬಗ್ಗೆ ಮಾತನಾಡಿದರು. ಆಂಟಿ ರಾಗಿಂಗ ಜಾಗ್ರತಿ ಬಗ್ಗೆ ವಿಡಿಯೋ ತುಣುಕನ್ನು ಪ್ರದರ್ಶಿಸ ಲಾಯಿತು.

ಸಹಾಯಕ ಪ್ರಾಧ್ಯಾಪಕರಾದ ಡಾ ಸನಾ ಇಜಾಜ ನಿರೂಪಿಸಿದರು , ಡಾ ಮಾರುಫ ಸ್ವಾಗತಿಸಿದರು , ಡಾ ಗೀತಾಂಜಲಿ ಕಾರ್ಯಕ್ರಮಗಳ ಪಟ್ಟಿ ಹೇಳಿದರು. ಡಾ ಜಿಬ್ರಾನ್ ಅನ್ವರ ವಂದಿಸಿದರು.
ನಂತರ ಕಾನೂನು ನಿಕಾಯದ ಮಹಾಲಕ್ಷ್ಮಿ ರಾಗಿಂಗ ಬಗ್ಗೆ ಜಾಗೃತಿ ಮೂಡಿಸಲು ಆಕ್ಟ್ ಬಗ್ಗೆ ಸೆಮಿನಾರ ನೀಡಿದರು.

ಈ ಕಾರ್ಯಕ್ರಮದಲ್ಲಿ ಐ ಕ್ಯೂ ಎ ಸಿ ನಿರ್ದೇಶಕ ಡಾ ಅಬ್ದುಲ್ ಬಶೀರ, ಡೀನರಾದ ಡಾ ಗುರುಪ್ರಸಾದ, ಡಾ ಅನೂಪ್ ದೇಸಾಯಿ, ಡಾ ಶ್ರೀನಿವಾಸ, ಡಾ ಸುಭಾಸ ಕಮಲ, ಡಾ ಇಕ್ಬಾಲ ಮಟ್ಟು ಮತ್ತು ಡಾ ಸಿದ್ದೇಶ ಸಿರವಾರ, ಮೆಡಿಕಲ್ ಸೂಪೇರಿಟೆಂಡೆಂಟ ಡಾ ಸಿದ್ಧಲಿಂಗ ಚೆಂಗಟಿ ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.