
ವಿಜಯಪುರ, ಆ.13: ಪಿಗ್ಮಿ ಏಜೆಂಟ್ ಶರಣಬಸಪ್ಪ ಜೇವರ್ಗಿ (43) ಅವರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗೋಳಗುಮ್ಮಜ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಆ.7ರಂದು ಸಂಜೆ 5 ಗಂಟೆ ಸುಮಾರಿಗೆ ಶರಣಬಸಪ್ಪ ಅವರು ಪಿಗ್ಮಿ ಹಣ ಸಂಗ್ರಹಿಸಲು ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ವಿಜಯಪುರ ನಗರದ ಕೆಎಚ್‍ಬಿ ಕಾಲನಿ, ಮುಬಾರಕ್ ಚೌಕ್ ಬಳಿ ತೆರಳುತ್ತಿದ್ದಾಗ ಆರೋಪಿಗಳು ಹರಿತವಾದ ಆಯುಧದಿಂದ ತಲೆಗೆ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಿಎಲ್‍ಡಿಇ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದರು.
ಈ ಕುರಿತು ಗೋಳಗುಮ್ಮಜ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಎಸ್‍ಪಿ ನಾಗರಾಜ್ ಜೆ. ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ತನಿಖೆ ನಡೆಸಿದ ಪೆÇಲೀಸರು ಜೆಎಂ ರಸ್ತೆಯ ನಿವಾಸಿ ಸರ್ಫರಾಜ್ ತಂ. ಸಿಕಂದರ್ ಶೇಖ್ (35) ಹಾಗೂ ಕಾನೂನು ಸಂಘರ್ಷಕ್ಕೊಳಗಾದ 17 ವರ್ಷದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಪೆÇಲೀಸರ ಪ್ರಕಾರ, ಸರ್ಫರಾಜ್ ಶೇಖ್ ಮೃತ ಶರಣಬಸಪ್ಪ ಅವರು ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿದ್ದ. ಇದೇ ಕಾರಣಕ್ಕೆ ತನ್ನ ಬಳಿ ಗೌಂಡಿ ಕೆಲಸ ಮಾಡುತ್ತಿದ್ದ 17 ವರ್ಷದ ಬಾಲಕನ ಸಹಾಯ ಪಡೆದು, ಆ.7ರಂದು ನಂಬರ್ ಪ್ಲೇಟ್ ಇಲ್ಲದ ಮೋಟಾರ್‍ಸೈಕಲ್‍ನಲ್ಲಿ ಶರಣಬಸಪ್ಪ ಅವರನ್ನು ಹಿಂಬಾಲಿಸಿ, ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳಿಂದ ಕೊಲೆಗೆ ಬಳಸಿದ್ದ ಕೊಡಲಿ ಹಾಗೂ ಮೋಟಾರ್‍ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಇಬ್ಬರ ದಸ್ತಗೀರ್ ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ತನಿಖೆಯನ್ನು ಡಿಎಸ್‍ಪಿ ನಾಗರಾಜ್ ಜೆ., ಸಿಪಿಐ ಸಂಜೀವ ಬಳಿಗಾರ, ಪಿಎಸ್‍ಐ ಎಂ.ಡಿ. ಘೋರಿ, ಆದರ್ಶನಗರ ಠಾಣೆ ಪಿಎಸ್‍ಐ ಸೀತಾರಾಮ್ ಲಮಾಣಿ ಹಾಗೂ ಸಿಬ್ಬಂದಿ ಒಳಗೊಂಡ ತಂಡ ನಡೆಸಿದೆ.






























