
ಕೆ.ಆರ್.ಪುರ, ಸೆ.೨೬- ದಲಿತಪರ ಸಂಘಟನೆಗಳು ಹಾಗೂ ನಾಯಕರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಖಂಡನೀಯ ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಭೀಮ ಸಂಘನೆಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಮಹದೇವಪುರ ಕ್ಷೇತ್ರದ ಕಾಡುಗುಡಿ ಯಲ್ಲಿ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತನಾಡಿದರು.
ಕೋಮು ದ್ವೇಷದ ಭಾಷಣಕ್ಕೆ ಕಾನೂನು ತಂದ ರೀತಿಯಲ್ಲಿ ಬಾಬಾ ಸಾಹೇಬರ ಮತ್ತು ನೀಲಿ ಶಾಲು ಬಗ್ಗೆ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ತರಬೇಕೆಂದು ಒತ್ತಾಯಿಸಿದರು.
ದಲಿತ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಿರುವುದರ ಬಗ್ಗೆ ಅವರೆ ಆತ್ಮ ಅವಲೋಕನಾ ಮಾಡಿಕೊಳ್ಳಬೇಕು. ರಾಜ್ಯದ ಪ್ರತಿ ಗ್ರಾಮಕ್ಕೆ ಪ್ರತಿ ಸಮುದಾಯಕ್ಕೆ ಬಾಬಾ ಸಾಹೇಬರು ನೀಲಿ ಬಣ್ಣದ ಮಹತ್ವ ತಿಳಿಸಿದ್ದು, ದಲಿತ ಚಳುವಳಿಗಾರರು ಎಂಬುದನ್ನು ಯಾರು ಮರೆಯಬಾರದು ಎಂದು ಕರ್ನಾಟಕ ದಲಿತ ಕ್ರೀಯ ವೇದಿಕೆ ರಾಜ್ಯಾಧ್ಯಕ್ಷರು, ಕಾಡುಗೋಡಿ ಸೊಣ್ಣಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ, ಮುನಿಆಂಜಿನಪ್ಪ, ಮುನಿಮಾರಪ್ಪ, ಮಲ್ಲೇಶ್, ಬೆಳತೂರು ವೆಂಕಟೇಶ್, ಮುರುಗನ್, ಗಂಗಣ್ಣ, ಕರ್ನಾಟಕ ಅಹಿಂದ ವೇಧಿಕೆ ಮಹಿಳಾ ರಾಜ್ಯಾಧ್ಯಕ್ಷ ಶೋಭ, ಮೀನಾಕ್ಷಿ ಭಾಗಿಯಾಗಿದ್ದರು.

























