
ಕಲಬುರಗಿ: ರಾಜ್ಯದ ಕಾಂಗ್ರೆಸ್ ಸರಕಾರ ಜನತೆಗೆ ಸುಳ್ಳು ಭರವಸೆ ನೀಡಿದ ಭ್ರಷ್ಟ ಮತ್ತು ಸುಳ್ಳು ಸರಕಾರವಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲೆ ವತಿಯಿಂದ ಇಂದು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಮುಖಂಡರಾದ ಶರಣಪ್ಪ ತಳವಾರ, ರಾಜು ವಾಡೇಕರ್, ಅವ್ವಣ್ಣ ಮ್ಯಾಕೇರಿ,ಮಲ್ಲಿಕಾರ್ಜುನ ಜಿನಕೇರಿ,ಶಿವಯೋಗಿ ನಾಗನಳ್ಳಿ, ಬಂಡೇಶ ತಾರಫೈಲ್ ಸೇರಿದಂತೆ ಹಲವರು ಪಾಲ್ಗೊಂಡರು.























