ಕಲಬುರಗಿ: ಭಾರತೀಯ ಚುನಾವಣೆ ಆಯೋಗದ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸಿ, ಎಸ್‍ಐಆರ್ ಪ್ರಕ್ರಿಯೆ ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಕೆ.ನೀಲಾ,ಮರೆಪ್ಪ ಹಳ್ಳಿ,ಅರ್ಜುನ ಭದ್ರೆ,ಪಿಡ್ಡಪ್ಪ ಜಾಲಗಾರ,ಭೀಮಣ್ಣ ಬೋನಾಳ, ಶಿವಶರಣಪ್ಪ ಮುಳೇಗಾಂವ್,ಶಾಂತಾ ಘಂಟೆ,ಸಾಯಬಣ್ಣ ಹೋಳ್ಕರ್,ಶರಣಗೌಡ ಪಾಟೀಲ,ನಾಗೀಂದ್ರಪ್ಪ ಥಂಬೆ ,ಧನರಾಜ ಸೇರಿದಂತೆ ಹಲವರು ಪಾಲ್ಗೊಂಡರು