Home ಜಿಲ್ಲೆ ಬೆಂಗಳೂರು ಪಡಿತರ ಮಾರಾಟ,ಇ-ಸ್ಟಾಂಪಿಂಗ್ ಆರ್ಥಿಕ ವಹಿವಾಟಿನಿಂದ ಲಾಭ

ಪಡಿತರ ಮಾರಾಟ,ಇ-ಸ್ಟಾಂಪಿಂಗ್ ಆರ್ಥಿಕ ವಹಿವಾಟಿನಿಂದ ಲಾಭ

ಮಾಲೂರು.ಸೆ.೯-ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಮಾರಾಟ ಹಾಗೂ ಇ-ಸ್ಟಾಂಪಿಂಗ್ ಆರ್ಥಿಕ ವಹಿವಾಟು ಮಾರಾಟದಿಂದ ೨೦೨೫-೨೬ ನೇ ಸಾಲಿನಲ್ಲಿ ೬,೧೪,೮೧೬ ಲಾಭಾಂಶ ಬಂದಿರುವುದಾಗಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ ಹೇಳಿದರು.


ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರ ಸಹಕಾರ ಸಂಘದ ಆವರಣದಲ್ಲಿ ೨೦೨೫-೨೬ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಂಘವು ೨೩೭೯ ಷೇರುದಾರ ಸದಸ್ಯರನ್ನು ಹೊಂದಿದ್ದು, ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಹಾಗೂ ಇ-ಸ್ಟಾಪಿಂಗ್ ಪೇಪರ್ ಮಾರಾಟ ಮಾಡಲಾಗುತ್ತಿದ್ದು, ಸಂಘದ ಎಲ್ಲಾ ನಿರ್ದೇಶಕರಗಳ ಸಹಕಾರ ಹಾಗೂ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಸಂಘವು ಲಾಭದಾಯಕವಾಗಿದೆ ಎಂದರು.


ಮುಂಬರುವ ದಿನಗಳಲ್ಲಿ ಜನತಾ ಬಜಾರ್ ಮೂಲಕ ಲೇಖನಿ ಸಾಮಗ್ರಿಗಳು ಹಾಗೂ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡುವ ಮಳಿಗೆ ತೆರೆಯುವ ಉದ್ದೇಶವಿದೆ ಹೊಂದಿದ್ದು ನೂತನ ಕಟ್ಟಡ ನಿರ್ಮಾಣ ದುರಸ್ತಿ ಮಾಡಲಾಗಿದೆ. ಷೇರುದಾರರ ಸಂಖ್ಯೆಯನ್ನು ಸಹ ಹೆಚ್ಚಳ ಮಾಡಲಾಗುವುದು ಷೇರುದಾರರು ಸಹಕಾರ ಸಂಘದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.


ಸಭೆಯಲ್ಲಿ ಉಪಾಧ್ಯಕ್ಷ ಡಿ.ಎಂ.ನಂಜುಂಡಪ್ಪ, ಸಲಹೆಗಾರ ಡಿ.ಪಿ.ಬೈಯ್ಯಣ್ಣ, ಸಂಪಂಗಿರಾಮಯ್ಯ, ಪಿ.ಬಿ.ವೆಂಕಟಸ್ವಾಮಿ, ಡಿ.ವಿ.ಸುಬ್ರಮಣಿ, ಮುನಿರಾಜು, ರಾಮಕೃಷ್ಣಪ್ಪ, ವೆಂಕಟೇಶ್, ಲಕ್ಷ್ಮಮ್ಮ, ಕಾಂತಮ್ಮ, ನಿರ್ಮಲಮ್ಮ, ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಮುನಿರಾಜು, ಸಿಬ್ಬಂದಿ, ವಿ.ಕೆ.ನಾಗಮಣಿ, ಎಂ.ಸುರೇಶ್, ಮೋಹನ್, ಪಿಳ್ಳಪ್ಪ, ಇನ್ನಿತರರು ಹಾಜರಿದ್ದರು.