
ಕುಂದಗೋಳ ಜು ೨೯: ಸಮಾಜದ ಅಂಕುಡೊAಕು ಸರಿಪಡಿಸಲೆತ್ನಿಸುವ ಪತ್ರಕರ್ತರು ವೈಯಕ್ತಿಕ ಕಾರ್ಯ ಬದಿಗೊತ್ತಿ ಕಾಯಾ,ವಾಚಾ,ಮನಸಾ ಶ್ರಮಿಸುವ ಪತ್ರಿಕಾ ರಂಗ
ಕರ್ತರಾಗಿದ್ದಾರೆ ಎಂದು ಪಂಚಗ್ಯಾರAಟಿ ಸಮೀತಿ ಮಾಜಿ ಅಧ್ಯಕ್ಷ ಶಿವಾನಂದ ಬೆಂತೂರ ಹೇಳಿದರು.
ಕುಂದಗೋಳ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ಯ ಅನೇಕ ಪತ್ರಕರ್ತರನ್ನು ಗೌರವಿಸಿ ಮಾತನಾಡಿ ಇಂದು ಪತ್ರಕರ್ತರ ಸೇವೆ ಸರ್ವರಿಗೂ ಅಗತ್ಯವಾಗಿದ್ದು, ಸಮಾಜ ಅವರಿಂದ ಸರಿಯಾದ ಪ್ರಯೋಜನ ಪಡೆದುಕೊಂಡು ಅವರನ್ನು ಗೌರವಿಸುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಿಸಾನ ಸಮಿತಿ ಅಧ್ಯಕ್ಷ ರಮೇಶ ಕೊಪ್ಪದ ಮಾತನಾಡಿ ಸಮಾಜದ ಅಭಿವೃದ್ಧಿಗೆ ಹಗಲಿರಳು ಶ್ರಮಿಸುವ ಪತ್ರಕರ್ತರಿಗೆ ಸರಿಯಾದ ರೀತಿಯಲ್ಲಿ ಭದ್ರತೆ ಒದಗಿಸಬೇಕು ಜತೆಗೆ ಅವರ ಸಂಘಕ್ಕೆ ನಿವೇಶನ ಒದಗಿಸಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಮುಖಂಡರಾದ ಲಕ್ಷ÷್ಮಣ ಚುಳಕಿ, ಪ.ಪಂ.ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಿರರೆಸೂರ, ಗ್ಯಾರಂಟಿ ಸಮಿತಿ ಮಾಜಿ ಸದಸ್ಯ ಶಶಿಧರ ಸೋಮರಡ್ಡಿ, ತಾಲೂಕಾ ಜೆ.ಡಿ.ಎಸ್ ಅಧ್ಯಕ್ಷ ಶಂಕರಗೌಡ ದೊಡಮನಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಕೈಯಿಂ ನಾಲಬಂದ, ಭೂ ನ್ಯಾಯ ಮಂಡಳಿ ಸದಸ್ಯ ಪ್ರವೀಣ ಕಟ್ಟಿಮನಿ, ಸಮಾಜ ಸೇವಕರಾದ ಛಾಯಪ್ಪ ಹೊಸಮನಿ, ಇರ್ಷಾದ ಮುಲ್ಲಾ, ಬಸವರಾಜ ಗುಡೇನಕಟ್ಟಿ, ಅನೀಲ ಸೇರಿದಂತೆ ಇತರರಿದ್ದರು.






























