
ಕುಂದಗೋಳ ಜು.೩೧: ದಾರಿ ತಪುö್ಪವವರಿಗೆ ಅಂಕುಶವಾಗಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದರು.
ಕುಂದಗೋಳ ಹರಭಟ್ಟ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರ ನೈಜ ವರದಿಯಿಂದ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನಿಪ ಘಟಕಾಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ ಸಾಮಾಜಿಕ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮ ನಿಖರತೆ ಹೊಂದಿದೆ ಎಂದರು.
ಶಿಕ್ಷಕ ಎಸ್.ಸಿ.ಶ್ಯಾನವಾಡ ಉಪನ್ಯಾಸ ನೀಡಿದರು. ಹಿರೇಮಠದ ಶಿಥಿಕಂಠೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪುರಸ್ಕöÈತ ನಾಗರಾಜ ಕುಂಕೂರ ಸೇರಿದಂತೆ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಜಾಕೆಟ್ ವಿತರಿಸಲಾಯಿತು.
ಪ್ರಾಚಾರ್ಯ ಎಲ್.ಎಲ್.ಲಮಾಣಿ, ತಾಲ್ಲೂಕು ಕಾನಿಪ ಅಧ್ಯಕ್ಷ ಅಶೋಕ ಘೋರ್ಪಡೆ, ತಾಲ್ಲೂಕು ಜೆಡಿಎಸ್ ಘಟಕಾಧ್ಯಕ್ಷ ಶಂಕರಗೌಡ ದೊಡ್ಡಮನಿ, ಎಲ್.ಎಸ್.ಕೊನೇರಿ, ಹಾಲೇಶ ದೊಡ್ಡಮನಿ, ಶಶಿಕುಮಾರ್ ಅಕ್ಕಿ ಇನ್ನಿತರರಿದ್ದರು.






























