
ಗುರುಮಠಕಲ್: ಲಯನ್ಸ್ ಕ್ಲಬ್ ಆಫ್ ಗುರುಮಠಕಲ್ ವತಿಯಿಂದ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದಂತಹ ಪೂಜ್ಯ ಶ್ರೀ ನಿರಂಜನ ಪ್ರಣವ ಸ್ವರೂಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಜಿ ಯವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಶಿಕ್ಷಕರ ವೃತ್ತಿ ಪವಿತ್ರ ವೃತ್ತಿ, ಸಮಾಜ ಏನಾದರು ಬದಲಾವಣೆಯಾಗಬೇಕಾದರೆ ಅದು ಶಿಕ್ಷಕರಿಂದಲೆ ಸಾಧ್ಯ ಅಂಥಹ ಶ್ರೇಷ್ಠ ವೃತ್ತಿ ಶಿಕ್ಷಕರ ವೃತ್ತಿ ಎಂದು ಹೇಳಿದರು. ಹಾಗಾಗಿ ಸಮಾಜ ಶಿಕ್ಷಕರನ್ನು ಗುರುತಿಸಿ ಅವರನ್ನು ಸನ್ಯಾಸಿದಾಗ ಇನ್ನೂಳಿದ ಶಿಕ್ಷಕರಿಗೂ ಪ್ರೇರಣೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯರು ಮಾತನಾಡಿದರು. ಈವೇಳೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚೇರ್ ಪರ್ಸನ್ ದಾಸಪ್ಪ ಯಾದವ್, ಲಾಯನ್ಸ್ ಕ್ಲಬ್ ಅಧ್ಯಕ್ಷರು ಶಶಿಕಾಂತ ಜನಾರ್ಧನ, ರಾಜ್ಯ ಸರಕಾರಿ ನೌಕರರ ಸಂಘ ತಾಲೂಕಅಧ್ಯಕ್ಷರು ಸಂತೋಷ ಕುಮಾರ ನಿರೇಟಿ, ಖಜಾಂಚಿಗಳು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷರು ನಾರಾಯಣರೆಡ್ಡಿ ಪೋಲಿಸ್ ಪಾಟೀಲ್, ಲಾಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀನೀವಾಸ ರೆಡ್ಡಿ ಪತ್ತಿ, ಡಿಸ್ಟಿಕ್ಟ್ ಚೇರ್ ಪರ್ಸನ್ ರಾಮಕೃಷ್ಣ ಯಾದವ್ ಗುರುಮಠಕಲ್, ಇ ಸಿ ಒ ರವೀಂದ್ರ ಚೌವಾಣ್, ಇಸಿಒ ಕಿಸಾನ ಪವರ್, ಪ್ರಕಾಶ ವೀರಶಾಸ್ತ್ರಿ, ಎಸ್ ಎಮ್ ಭೂತಾಲ, ಶಿವುಕುಮಾರ ಜಾಡರ್, ಪ್ರಕಾಶ ಗುಮಡಾಲ ವೇದಿಕೆಯ ಮೇಲಿದ್ದರು. ಶಶಿಕಾಂತ ಜನಾರ್ಧನ ಅವರು ಸ್ವಾಗತಿಸಿದರು, ಶರಣಪ್ಪ ಧರ್ಮಪೂರ ಕಾರ್ಯಕ್ರಮವನ್ನು ನಿರುಪಿಸಿ ಮತ್ತು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರ ಅಭಿಮಾನಿಗಳು, ಶಿಕ್ಷಕರು, ಗುರು ಮಾತೆಯರು, ಸಂಬAಧಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.































