Home ಜಿಲ್ಲೆ ಅಮರ ಧ್ವಜ ಮಹೋತ್ಸವದ ಸಿದ್ಧತೆಗಳಿಗೆ ಚಾಲನೆ: ಗಣ್ಯರಿಗೆ ಸನ್ಮಾನ

ಅಮರ ಧ್ವಜ ಮಹೋತ್ಸವದ ಸಿದ್ಧತೆಗಳಿಗೆ ಚಾಲನೆ: ಗಣ್ಯರಿಗೆ ಸನ್ಮಾನ

ಹುಬ್ಬಳ್ಳಿ,ನ೨೭: ದಾದಾವಾಡಿಯ ಆವರಣದಲ್ಲಿ ಶ್ರೀ ಜೈನ ಶ್ವೇತಾಂಬರ ಖರತರಗಚ್ಛ ಸಂಘದ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಮುಂಬರುವ ೧೩ನೇ ವಾರ್ಷಿಕೋತ್ಸವ ಹಾಗೂ ಅಮರ ಧ್ವಜ ಮಹೋತ್ಸವದ ಆಚರಣೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

ಮುಂಬರುವ ಅಮರ ಧ್ವಜದ ಮುಖ್ಯ ಲಾಭಾರ್ಥಿಗಳಾಗಿ ಮುಥಾ ವಾಗಮಲ್ ಭೂರಾಜ್ ಬಾಫ್ನಾ ಕುಟುಂಬ, ನಕೋಡಾ ಭೈರವ ಧ್ವಜದ ಲಾಭಾರ್ಥಿಗಳಾಗಿ ಚಂಪಾಲಾಲ್ ಹಿಮ್ಮತ್ಮಲ್ ಕೇಸಾಜಿ ಕುಟುಂಬ ಹಾಗೂ ಪದ್ಮಾವತಿ ಮಾತೆಯ ಧ್ವಜದ ಲಾಭಾರ್ಥಿಗಳಾಗಿ ಹರಕಚಂದ್ ಭೀಮಾಜಿ ಕಟಾರಿಯಾ ಕುಟುಂಬಗಳು ಧ್ವಜಾರೋಹಣದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿವೆ.

ಈ ಸಂದರ್ಭದಲ್ಲಿ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್ ೨೨ರಂದು ಅಷ್ಟಪ್ರಕಾರೀ ಅಭಿಷೇಕ ಹಾಗೂ ೨೩ರಂದು ಸತರಭೇದಿ ಪೂಜೆ ಮತ್ತು ಅಮರ ಧ್ವಜ ಮಹೋತ್ಸವ ನಡೆಯಲಿದೆ. ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ಸುರೇಶ್ ಬಾಫ್ನಾ ಅವರನ್ನು ಸಂಯೋಜಕರನ್ನಾಗಿ ನೇಮಕ ಮಾಡಲಾಯಿತು.

ವಿವಿಧ ಸಾಧನೆಗಳಿಗಾಗಿ ಸಮಾಜದ ಗಣ್ಯರಿಗೆ ಸನ್ಮಾನ
ಸಭೆಯ ನಂತರ ಸಮಾಜದ ವಿವಿಧ ಸಂಘ-ಸAಸ್ಥೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ವಹಿಸಿಕೊಂಡ ಹಾಗೂ ವಿಶೇಷ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.

ಭಾರತೀಯ ಜೈನ ಸಂಘಟನೆಯ ರಾಷ್ಟಿçÃಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಗೌತಮ್ ಬಾಫ್ನಾ ಅವರನ್ನು ಅಭಿನಂದಿಸಲಾಯಿತು.

ಸಿವಾಂಚಿ ರತ್ನ ಪುರುಷ-೨೦೨೬ ಪ್ರಶಸ್ತಿಗೆ ಭಾಜನರಾದ ರಮೇಶ್ ಬಾಫ್ನಾ ಅವರನ್ನು ಗೌರವಿಸಲಾಯಿತು. ಪ್ರಕಾಶ್ ಲೂಂಕಡ್, ಕಲ್ಪೇಶ್ ಕಾಂಕರಿಯಾ, ಗೌತಮ್ ಬಾಫ್ನಾ, ಸಂದೀಪ್ ಬಾಫ್ನಾ, ದೇವ್ ಉಪಸ್ಥಿತರಿದ್ದರು.

ಸಭೆಯಲ್ಲಿ ಉತ್ತಮ ಕಾನುಂಗಾ, ಶಾಂತಿಲಾಲ್ ಸುರಾಣಾ, ಹೇಮಂತ್ ಚೋಪ್ರಾ, ಕಲ್ಪೇಶ್ ತಾತೇಡ್, ಸುರೇಶ್ ಕವಾಡ್, ಮೂಲಚಂದ್ ಜೀರಾವಾಲಾ, ಭರತ್ ವಿನಾಯಕಿಯಾ ಸೇರಿದಂತೆ ದಾದಾವಾಡಿ ಜೈನ ಸೇವಾ ಸಂಘಟನೆ, ದಾದಾವಾಡಿ ಜೈನ ಯುವ ಸಂಘಟನೆ ಹಾಗೂ ಖರತರಗಚ್ಛ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.