Home ಜಿಲ್ಲೆ ಕಲಂಭಾವಿಯಲ್ಲಿ ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮ

ಕಲಂಭಾವಿಯಲ್ಲಿ ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮ


ಚನ್ನಮ್ಮನ ಕಿತ್ತೂರ,ನ.೨೯: ಮುಖ್ಯಮಂತ್ರಿ ಕನಸಿನ ಕೂಸಾದ ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮದ ಮೂಲಕ ರಾಜ್ಯದ-ಜಿಲ್ಲೆ-ತಾಲೂಕುಗಳ ಗ್ರಾಪಂ ವ್ಯಾಪ್ತಿಗಳಲ್ಲಿ ಜನಪ್ರತಿನಿಧಿಗಳು ಪ್ರತಿ ಶನಿವಾರ ಜನರ ಬಳಿಗೆ ತೆರಳಿ ಸಮಸ್ಯೆ ತಿಳಿದು ಸ್ಥಳದಲ್ಲಿ ಪರಿಹಾರ ಕಂಡುಕೊAಡು ಸಾರ್ವಜನಿಕರಿಗೆ ಅನುಕೂಲ ಮಾಡಲು ಅಧಿಕಾರಿಗಳು ಆಗಮಿಸಿದ್ದು ಜನತೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.


ತಾಲೂಕಿನ ಕಲಂಭಾವಿ ಗ್ರಾಮದ ಗ್ರಾಮದೇವತೆ .ಹಾಗೂ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರಜಾಸೇವಾ ಆಂದೋಲನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಹೌಸಿಂಗ್ ಸ್ಕಿಮ್‌ನಲ್ಲಿ ಬಡವರಿಗಾಗಿ ಸೂರು ಕಲ್ಪಿಸಲು ಸಿದ್ದವಾಗಿದ್ದು ಅನುದಾನ ಸರ್ಕಾರ ಭರಿಸಲಿದೆ ಸದ್ಯದಲ್ಲಿ ಬಿಡುಗಡೆಯಾಗಲಿದ್ದು ಸೌಜನ್ಯದಿಂದ ವರ್ತಿಸಿ ಫಲಾಭವಿಗಳ ಎಲ್ಲ ಅರ್ಜಿಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.


ಬರಗಾಲ ಬಿದ್ದ ಹಿನ್ನೆಲೆ ರಾಜ್ಯ ಸರ್ಕಾರ ಒಂದು ಎಕರೆಗೆ ರೂ. ೫ ಸಾವಿರದÀಂತೆ ನಿಮ್ಮ ಖಾತೆಗಳಿಗೆ ಭರಿಸುತ್ತಿದ್ದಾರೆ. ತೀವ್ರ ಬರಗಾಲವೆಂದು ಘೋಷಣೆಯಾಗಿರುವ ಕಲಂಭಾವಿ ಮತ್ತು ಎಂಕೆಹುಬ್ಬಳ್ಳಿ ಇವುಗಳಿಗೆ ಹೆಚ್ಚಿನ ಬರ ಘೋಷಿಸಿದೆ. ಗ್ರಾಮದೇವತೆ ಕಟ್ಟಡಕ್ಕೆ ರೂ. ೧೫ ಲಕ್ಷ, ಪಶು ಆಸ್ಪತ್ರೆ ರೂ. ೨೫ ಲಕ್ಷ, ಎರಡು ಶಾಲಾ ಕೊಠಡಿಗೆ ರೂ. ೩೦ ಲಕ್ಷ, ಶಾಲೆ ಅಡುಗೆ ಕೋಣೆಗೆ ರೂ. ೧೦ ಲಕ್ಷ, ಆಟದ ಮೈದಾನ ರೂ. ೨ ಲಕ್ಷ, ಸಮುದಾಯ ಭವನಕ್ಕೆ ರೂ. ೧೫ ಲಕ್ಷ, ಗ್ರಾಮದ ರಸ್ತೆ-ಗಟಾರ ಸೇರಿ ಅನೇಕ ಕಾಮಗಾರಿಗಳಿಗೆ ಒಟ್ಟು ರೂ. ೧ ಕೋಟಿ ೪೦ ಲಕ್ಷ ಅನುದಾನ ಭರಿಸಲಾಗಿದೆ. ಅದಲ್ಲದೇ ವಿಬಿ ಜಿ ರಾಮ್ ಜಿ ಯೋಜನೆ ಮುಖ್ಯಮಂತ್ರಿ ಅನುದಾನದಲ್ಲಿ ೩ ಗ್ರಾಮಗಳಿಗೆ ರೂ. ೧ ಕೋಟಿ ಅನುದಾನ ಭರಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಅನುಮೋದನೆ ಕಳಿಸಲಾಗಿದೆ. ಡಿಆರ್‌ಪಿ ಯೋಜನೆ ಮಾಡಲಾಗಿದ್ದು ಸರ್ಕಾರ ಮಟ್ಟದಲ್ಲಿ ಹೋಗಿದೇ ೭ ಕೆರೆ ತುಂಬುವ ವ್ಯವಸ್ಥೆ ಟೆಂಡರ್ ಮೂಲಕ ಮಾಡಲಾಗುವುದು ಎಂದರು.

ಈ ವೇಳೆ ಇಓ ಮಹೇಶ ಹೂಲಿ, ಟಿಎಚ್‌ಒ ಡಾ.ಸಂತೋಷ ಗಡದವರ, ಅರಣ್ಯ ಅಧಿಕಾರಿ ಸಿದ್ದಪ್ಪ ಕೋತ, ಕಿತ್ತೂರ-ಬೈಲಹೊಂಗಲ ಸರ್ವೇ ಅಧಿಕಾರಿ ಅಶೋಕ ಹೊಸಗೇರಿ, ಸಿಪಿಐ ಶಿವಾನಂದ ಗುಡಗನಟ್ಟಿ, ವಿಶೇಷ ತಹಶೀಲ್ದಾರ ಪ್ರಕಾಶ ಕೋರಿ, ಸಿಡಿಪಿಓ ಅರುಣಕುಮಾರ, ಕಂದಾಯ ನಿರೀಕ್ಷಕ ಎಂ.ಎA. ನೀರಲಗಿ, ಪಿಡಿಓ ವಿನಯ ಕೊರವಿ, ಪಶು ಇಲಾಖೆ ರಾಜೇಂದ್ರ ಕುಲಕರ್ಣಿ, ಇಸ್ಮಾಯಿಲ್ ಬೆಳವಡಿ, ಬಾಬಾಜಾನ ಬೆಳವಡಿ, ಈರಣ್ಣಾ ಅಂಗಡಿ, ಎಲ್ಲಪ್ಪ ಸೋಮನಟ್ಟಿ, ಮಲ್ಲಪ್ಪ ಉಪಾಸಿ, ಗ್ರಾಮ ಲೆಕ್ಕಿಗ ಶ್ರೀದೇವಿ ಗಾಣಿಗೇಸ ಸ್ವಾಗತಿಸಿದರು. ಬಸವರಾಜ ಗೌರನ್ನವರ ನಿರೂಪಿಸಿದರು. ಅಂಗನವಾಡಿ ಮೇಲ್ವಿಚಾರಕರು, ಕಂದಾಯ-ಗ್ರಾಪA ಸಿಬ್ಬಂದಿ, ತಾಲೂಕಮಟ್ಟದ ಎಲ್ಲ ಅಧಿಖಾರಿಗಳು, ಸಾರ್ವಜನಿಕರಿದ್ದರು.