Home ಜಿಲ್ಲೆ ದಹಿ ಹಂಡಿ ವಿಜೇತರಿಗೆ ಪ್ರಭು ಚವ್ಹಾಣರಿಂದ ೫೧ ಸಾವಿರ ನಗದು, ಟ್ರೋಫಿ ವಿತರಣೆ

ದಹಿ ಹಂಡಿ ವಿಜೇತರಿಗೆ ಪ್ರಭು ಚವ್ಹಾಣರಿಂದ ೫೧ ಸಾವಿರ ನಗದು, ಟ್ರೋಫಿ ವಿತರಣೆ

ಔರಾದ್ : ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉದ್ಭವಲಿಂಗ ಶ್ರೀ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಔರಾದ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಅದ್ದೂರಿ ದಹಿ ಹಂಡಿ ಉತ್ಸವದಲ್ಲಿ ವಿಜೇತ ತಂಡಗಳಿಗೆ ಶಾಸಕರು ಪ್ರಭು ಬಿ. ಚವ್ಹಾಣ ಅವರು ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ವಿತರಿಸಿ ಗೌರವಿಸಿದರು.
ಕಾಲೇಜು ವಿಭಾಗದಲ್ಲಿ ಔರಾದ ಸರ್ಕಾರಿ ಪದವಿ ಕಾಲೇಜು ತಂಡ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮುಕ್ತಿನಾಥ ತಂಡ ಅತಿ ಕಡಿಮೆ ಅವಧಿಯಲ್ಲಿ ಮಡಿಕೆ ಒಡೆದು ಪ್ರಥಮ ಸ್ಥಾನ ಪಡೆದುಕೊಂಡು ?೫೧ ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡವು.
ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಶಾಸಕ ಪ್ರಭು ಚವ್ಹಾಣ ಅವರು ತಂಡದ ಸದಸ್ಯರನ್ನು ಅಭಿನಂದಿಸಿ, ಅವರ ಕ್ರೀಡಾ ಸ್ಫೂರ್ತಿ ಹಾಗೂ ಒಗ್ಗಟ್ಟನ್ನು ಶ್ಲಾಘಿಸಿದರು. ಬಹುಮಾನ ಸ್ವೀಕರಿಸಿದ ಯುವಕರ ಸಂಭ್ರಮ ಮುಗಿಲು ಮುಟ್ಟಿದ್ದು, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.
ಕಾಲೇಜು ವಿಭಾಗದಲ್ಲಿ ಅಮರೇಶ್ವರ ಪಿಯು ಕಾಲೇಜು ತಂಡ ದ್ವಿತೀಯ ಹಾಗೂ ಶಾಹೀನ್ ಪಿಯು ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿತು. ಸಾರ್ವಜನಿಕ ವಿಭಾಗದಲ್ಲಿ ಔರಾದನ ಭಗೀರಥರಾಜಾ ತಂಡ ದ್ವಿತೀಯ ಹಾಗೂ ಇಂದಿರಾನಗರ ತಾಂಡಾ ತಂಡ ತೃತೀಯ ಸ್ಥಾನ ಪಡೆದವು.
ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ೩೧ ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೆ ೨೧ ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಎಲ್ಲಾ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಬಹುಮಾನ ವಿತರಣೆಯ ವೇಳೆ ವಿಜೇತ ತಂಡಗಳ ಸದಸ್ಯರು ಶಾಸಕರೊಂದಿಗೆ ಸಂಭ್ರಮ ಹಂಚಿಕೊAಡರು. ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ, ಘೋಷಣೆಗಳ ಮೂಲಕ ತಂಡಗಳನ್ನು ಹುರಿದುಂಬಿಸಿದರು. ದಹಿ ಹಂಡಿ ಉತ್ಸವವು ಔರಾದನಲ್ಲಿ ಯುವಶಕ್ತಿ, ಕ್ರೀಡಾ ಸ್ಫೂರ್ತಿ ಹಾಗೂ ಸಾಂಸ್ಕೃತಿಕ ಸಂಭ್ರಮದ ಅದ್ಭುತ ಸಂಗಮವಾಗಿ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಪ್ರಕಾಶ ಅಲ್ಮಾಜೆ, ದಯಾನಂದ ಘೂಳೆ, ಸಂಜು ವಡೆಯರ್, ಕೇರಬಾ ಪವಾರ್, ಯಾದು ಮೇತ್ರೆ, ಬಾಬು ರಾಠೋಡ್, ಗುಂಡಪ್ಪ ಮುಧಾಳೆ, ಸುಜಿತ್ ರಾಠೋಡ್, ಪ್ರದೀಪ ಪವಾರ್, ಗುರುನಾಥ ರಾಜಗೀರಾ, ಮಲ್ಲಪ್ಪ ದಾನಾ, ನಾಗಶೆಟ್ಟಿಗಾದಗೆ, ಸ್ವಾಮಿದಾಸ ಮುಧಾಳೆ, ಧನರಾಜ ಮುಧೋಳ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಅಬ್ಜಲ್ ಪಠಾನ್, ಚೇತನ ಕಪ್ಪಿಕೇರೆ, ಸುನೀಲ ಸುಸಲಾದೆ, ಜಗು ಚಿಟ್ಮೆ, ಪ್ರಕಾಶ ಭಂಗಾರೆ, ಆನಂದ ದ್ಯಾಡೆ, ಅಂಬಾದಾಸ ನೇಳಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.