
ಕಲಬುರಗಿ,ಜು.17: ಎಚ್‍ಪಿ ಕಂಪನಿಯ ಲೇಬಲ್ ಹಚ್ಚಿ ಹೈಡ್ರೋಲಿಕ್ ಆಯಿಲ್ ಮಾರುತ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿದ ರೋಜಾ ಠಾಣೆ ಪೊಲೀಸರು 13 ಕ್ಯಾನ್ ನಕಲಿ ಆಯಿಲ್ ಜಪ್ತಿ ಮಾಡಿದ್ದಾರೆ.
ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಜಹೀರ್ ಅಬ್ಬಾಸ್ ಇಕ್ಬಾಲ್ ಹುಸೇನ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 60 ಸಾವಿರ ರೂ ಮೌಲ್ಯದ 13 ಕ್ಯಾನ್ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಎಚ್‍ಪಿ ಕಂಪನಿ ಮ್ಯಾನೇಜರ್ ಫಾರೆನ್ಸಿಸ್ ಪಾಲ್ ಎಂಬುವವರು ದೂರು ನೀಡಿದ್ದರು.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ, ಡಿಸಿಪಿ ಶಾಲೂ ಅವರ ಮಾರ್ಗದರ್ಶನದಲ್ಲಿ ರೋಜಾ ಠಾಣೆ ಪಿಐ ದಿಲೀಪ ಸಾಗರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಕ್ಷ್ಮೀ,ಅಂಬರೀಶ, ಸಿಕಂದರ್ ಖಾನ್, ಸಿರಾಜ್ ಅವರು ದಾಳಿ ನಡೆಸಿದ್ದರು.






























