Home ಜಿಲ್ಲೆ ನಂಜನಗೂಡು ಮಠದಲ್ಲಿ ಪಂಚರಾತ್ರೋತ್ಸವಕ್ಕೆ ಚಾಲನೆ

ನಂಜನಗೂಡು ಮಠದಲ್ಲಿ ಪಂಚರಾತ್ರೋತ್ಸವಕ್ಕೆ ಚಾಲನೆ

ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೯: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಖ್ಯಾತರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೫ನೇ ಆರಾಧನಾ ಮಹೋತ್ಸವದ ಅಂಗವಾಗಿ ಪಂಚರಾತ್ರೋತ್ಸವವು ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ಭಕ್ತಿಭಾವದಿಂದ ಆರಂಭಗೊAಡಿತು.
ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಆಜ್ಞಾನುಸಾರ ನಡೆದ ಪಂಚರಾತ್ರೋತ್ಸವದ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಸಂಜೆ ಧರ್ಮಧ್ವಜಾರೋಹಣ, ಗೋಪೂಜೆ, ಲಕ್ಷ್ಮೀ ಪೂಜೆ, ಪ್ರಾರ್ಥನೋತ್ಸವ, ಶಾಖೋತ್ಸವ, ಧಾನ್ಯ ಪೂಜೆ, ಶ್ರೇಯ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕ ಅವರ ನೇತೃತ್ವದಲ್ಲಿ ವ್ಯವಸ್ಥಾಪಕ ರವಿ ಆಚಾರ್ಯ, ಅರ್ಚಕರಾದ ಶ್ರೀಧರಾಚಾರ್ಯ ಹಾಗೂ ದಾಮೋದರಾಚಾರ್ಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಆರಾಧನೋತ್ಸವದ ಪ್ರಯುಕ್ತ ದವಸ-ಧಾನ್ಯ, ನಗದು ಹಾಗೂ ಫಲಪುಷ್ಪಗಳನ್ನು ದೇಣಿಗೆಯಾಗಿ ನೀಡಿದ ದಾನಿಗಳನ್ನು ಶ್ರೀಮಠದ ವತಿಯಿಂದ ಶೇಷವಸ್ತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಧ್ವೇಶಾಚಾರ್ಯ ಜೋಶಿ (ಮುತ್ತಗಿ), ಅಶೋಕ ತಾವರಗೇರಿ, ಜಿ.ಎಸ್. ಕುಲಕರ್ಣಿ, ವಿ.ಬಿ. ಕುಲಕರ್ಣಿ, ಕಿರಣ ಕುಲಕರ್ಣಿ, ಭೀಮಣ್ಣ ಕುಲಕರ್ಣಿ, ಅರುಣ ತೊರವಿ, ಸಂತೋಷ ಕುಲಕರ್ಣಿ, ಡಾ. ಪ್ರಾಣೇಶ ಜಹಾಗೀರದಾರ ಸೇರಿದಂತೆ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.