
ಅಫಜಲಪುರ: ತಾಲೂಕಿನ ದೇವಲ ಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸಂಗೀತಾ ಸಿಂದೆ ಅವರು ತಾಲೂಕಿನಲ್ಲಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕೆಲವರು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಸುಮಾರು ಒಂದು ವರ್ಷದ ಹಿಂದೆ ಅಪರಾಧ ಪ್ರಕರಣದ ಹಿನ್ನೆಲೆಯುಳ್ಳ ಗ್ರಾಮದ ಹಿರಿಯ ಮುಖಂಡರೊಬ್ಬರೊAದಿಗೆ ಪಿಎಸ್‌ಐ ಸಂಗೀತಾ ಸಿಂದೆ ಅವರು ತೆಗೆಸಿಕೊಂಡಿದ್ದ ಫೋಟೋವನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅವರ ಕರ್ತವ್ಯಕ್ಕೆ ಚ್ಯುತಿ ತರುವ ಪ್ರಯತ್ನ ಮಾಡಲಾಗುತ್ತಿದೆ.
ಹಳೆಯ ಫೋಟೋವನ್ನು ಮುಂದಿಟ್ಟುಕೊAಡು ಅಧಿಕಾರಿಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಸರಿಯಲ್ಲ. ಗ್ರಾಮದ ಮುಖಂಡ ಹಿರಿಯ ಮಾರುತಿ ಮೂರನೇತ್ತಿಯವರಿಗೆ ಸನ್ಮಾನ ಮಾಡಿಯೇ ಇಲ್ಲಾ, ಹಲವು ವರ್ಷಗಳಿಂದ ೨೦೦೮ ರಿಂದ ಅವರು ಇಲ್ಲಿಯವರೆಗೆ ಯಾವುದೇ ಅಫರಾದ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ, ಗ್ರಾಮದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ, ಆದರೆ ಅವರ ಫೋಟೋ ಇಟ್ಟುಕೊಂಡು ದಕ್ಷ ಅಧಿಕಾರಿಯ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಎ??? ಸಂಗೀತಾ ಸಿಂದೆ ಅವರು ಬದ್ಧತೆಯಿಂದ ಕರ್ತವ್ಯ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಚೌಡಾಪುರ-ಗಾಣಗಾಪುರ ಸಂಪರ್ಕ ರಸ್ತೆಯ ಗುಂಡಿಗಳನ್ನು ಮುಚ್ಚಿ ವಾಹನ ಸವಾರರು ಮುಕ್ತವಾಗಿ ಸಂಚರಿಸಲು ಶ್ರಮ ವಹಿಸಿದ್ದರು, ಅವರ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಇಂತಹ ಅಧಿಕಾರಿಯನ್ನು ವಿನಾಕಾರಣ ಗುರಿಯಾಗಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಅಷ್ಟೇ ಅಲ್ಲದೆ ಪ್ರಾಮಾಣಿಕ ಅಧಿಕಾರೀ ಸಂಗೀತಾ ಸಿಂದೆಯ ಬೆಂಬಲಕ್ಕೆ ತಾಲೂಕಿನ ಅನೇಕ ಕನ್ನಡಪರ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳು,ಗಣ್ಯರು ನಿಂತಿದ್ದು, ಅಪಪ್ರಚಾರ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗೀತಾ ಸಿಂಧೆ ಯಾವುದೇ ತಪ್ಪು ಮಾಡಿಲ್ಲ, ಗಾಣಗಾಪುರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ಅವರ ವಿರುದ್ಧ ಕೆಲವು ಕಿಡಿಗೇಡಿಗಳು ವಾಸ್ತವ ಗೊತ್ತಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮದಲ್ಲಿ ಷಡ್ಯಂತ್ರ ಮಾಡುತ್ತಿರುವದನ್ನು ನಾವು ಖಂಡಸುತ್ತೇವೆ ಹಾಗೂ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಪಿಎಸ್‌ಐ ಸಿಂಧೆ ಇಂತಹ ಯಾವುದೇ ಷಡ್ಯಂತ್ರಕ್ಕೆ ಬೆಲೆ ಕೊಡದೆ ತಮ್ಮ ಪ್ರಾಮಾಣಿಕ ಕಾರ್ಯ ಮುಂದುವರಿಸಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅವರ ಬೆಂಬಲಕ್ಕೆ ಇದೆ.
ಮಹಾಂತೇಶ್ ಜಮಾದಾರ
ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲಬುರಗಿ.






























