Home ಜಿಲ್ಲೆ ನೂತನ ಸ್ವತಂತ್ರ ವಿತರಣಾ ಕೇಂದ್ರ ಆರಂಭ

ನೂತನ ಸ್ವತಂತ್ರ ವಿತರಣಾ ಕೇಂದ್ರ ಆರಂಭ

ಗದಗ,ಆ೫: ನಗರಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ಬುಕ್ ಮಾಡಿದ ಪಾರ್ಸೆಲ್‌ಗಳು ಗ್ರಾಹಕರಿಗೆ ಅದೇ ದಿನ ತಲುಪಲು ಸ್ವತಂತ್ರ ವಿತರಣಾ ಕೇಂದ್ರಗಳು ಸಹಕಾರಿಯಾಗಿವೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್.ಶಿರಹಟ್ಟಿ ಹೇಳಿದರು.

ಗದಗ ನಗರದ ನೂತನ ಸ್ವತಂತ್ರ ವಿತರಣಾ ಕೇಂದ್ರ ಉದ್ಘಾಟನೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಇ- ಕಾಮರ್ಸ್ ಸಂಸ್ಥೆ ಪ್ಲಿಪ್ ಕಾರ್ಟ್ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಪಾರ್ಸಲ್ ಸೇವೆ ಇನ್ನಷ್ಟು ಸುಲಭವಾಗಿ ತಲುಪಲಿದೆ. ನಗರ ಪ್ರದೇಶಗಳಲ್ಲಿ ಅಂಚೆ ಸೇವೆಯನ್ನು ಇನ್ನಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶದಿಂದ ಸ್ವತಂತ್ರ ವಿತರಣಾ ಕೇಂದ್ರಗಳಿAದ ಗ್ರಾಹಕರಿಗೆ ಸಮಯೋಚಿತವಾಗಿ ಪಾರ್ಸೆಲ್‌ಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬ ಅಂಚೆ ಬಟವಾಡೆ ಸಿಬ್ಬಂದಿ ಶೇ ೧೦೦ ರಷ್ಷು ವಿತರಣೆ ಮಾಡಬೇಕು ಎಂದರು.

ತAತ್ರಜ್ಞಾನದ ಅಳವಡಿಕೆ, ಸಿಬ್ಬಂದಿಯ ದಕ್ಷತೆ ಮತ್ತು ಗ್ರಾಹಕ ಕೇಂದ್ರಿತ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಮಾತ್ರ ಭಾರತೀಯ ಅಂಚೆ ಇಲಾಖೆಯು ಮುಂಬರುವ ದಿನಗಳಲ್ಲೂ ಜಾಗತಿಕ ಮಟ್ಟದ ಜನಪ್ರಿಯ ಸೇವಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆಯಲಿದೆ ಎಂದರು.

ಗ್ರಾಹಕರಿಗೆ ವಿಶ್ವಾಸ ಮತ್ತು ವೇಗದ ಸೇವೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಂಡು ವಿಳಾಸದಾರರಿಗೆ ನಿರ್ದಿಷ್ಟವಾದ ಸುರಕ್ಷತ ಬಟವಾಡೆ ಸೇವೆ ಒದಗಿಸುವ ಸಲುವಾಗಿ ಅಂಚೆ ಇಲಾಖೆ ಒಟಿಪಿ ಆಧಾರಿತ ಸುರಕ್ಷತ ವಿತರಣೆ, ಆನ್‌ಲೈನ್ ಪಾವತಿ, ಎಸ್‌ಎಂಎಸ್ ಅಧಿಸೂಚನೆಗಳು ಸೇರಿದಂತೆ ಹಲವು ಗ್ರಾಹಕಸ್ನೇಹಿ ಸೇವೆಗಳನ್ನು ಸಹ ಅಂಚೆಯು ಪರಿಚಯಿಸಿದೆ ಎಂದರು.

ಗದಗ ಉಪ ಉಪ ವಿಭಾಗದ ವಿನೋಧಕುಮಾರ ಮೇದಾರ ಅವರು ಮಾತನಾಡಿ, ಭಾರತೀಯ ಅಂಚೆ ಇಲಾಖೆಯು ಆಧುನಿಕರಣದ ಭಾಗವಾಗಿ ಸ್ವತಂತ್ರ ವಿತರಣಾ ಕೇಂದ್ರದಿAದ ಕಾರ್ಯನಿರ್ವಹಣೆ ಗ್ರಾಹಕರಿಗೆ ಗುಣಮಟ್ಟದ ಸೇವೆ ಕಲ್ಪಿಸುವ ಸಲುವಾಗಿ ಆರಂಭಿಸಲಾಗಿದೆ ಎಂದರು.

ಭಾರತೀಯ ಅಂಚೆಯು ಬರೀ ಒಂದು ಸರ್ಕಾರಿ ಸಂಸ್ಥೆ ಯಲ್ಲ. ಅದು ದೇಶದ ಭಾವನಾತ್ಮಕ ಕೊಂಡಿಯಾಗಿದೆ. ಖಾಸಗಿ ಸಂಸ್ಥೆಗಳು ಲಾಭವಿಲ್ಲದ ಕಡೆ ಸೇವೆ ನೀಡಲು ಹಿಂಜರಿಯುವಾಗ ಅಂಚೆ ಇಲಾಖೆಯೇ ಸಾಮಾನ್ಯ ಜನರ ಆಶಾಕಿರಣವಾಗಿದೆ ಎಂದರು.


ರೋಣ ಉಪ ವಿಭಾಗದ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ,ಐಡಿಸಿ ಮೇಲ್ವಿಚಾರಕರಾದ ಡಿ.ಜಿ.ಮ್ಯಾಗೇರಿ ಮಾತನಾಡಿದರು. ಪ್ರಧಾನ ಅಂಚೆ ಪಾಲಕರಾದ ಲಕ್ಷ÷್ಮಣ ಅಸುಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಅಂಚೆ ಪಾಲಕರಾದ ಮಂಜುನಾಥ ಕುರಿಯವರ, ಶರಣಪ್ಪ ನಾಯ್ಕರ, ಶಂಕರ ಕುಬ್ಬಳ್ಳಿ, ಬಸವರಾಜ ಶೇಡದ, ಮನೋಹರ ಕಡಿಯವರ ಸೇರಿದಂತೆ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.


ಮೇಘಾನಾ ಕುಲಕರ್ಣಿ ಪ್ರಾರ್ಥಿಸಿದರು. ಅಂಚೆ ಸಹಾಯಕ ಎಂ.ಟಿ.ಕರಿಗಾರ ನಿರೂಪಿಸಿ, ವಂದಿಸಿದರು.