Home ಜಿಲ್ಲೆ ಕಲಬುರಗಿ ರಾಷ್ಟ್ರಮಟ್ಟದ ಒಪನ್ ಕರಾಟೆ ಪಂದ್ಯಾವಳಿ:ಎಸ್.ಆರ್.ಎನ್ ಮೆಹತಾ ಶಾಲೆ ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನ

ರಾಷ್ಟ್ರಮಟ್ಟದ ಒಪನ್ ಕರಾಟೆ ಪಂದ್ಯಾವಳಿ:ಎಸ್.ಆರ್.ಎನ್ ಮೆಹತಾ ಶಾಲೆ ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನ

ಕಲಬುರಗಿ,ಆ.19: ಹೈದ್ರಾಬಾದ್‍ನ ವಿಜಯ ಭಾಸ್ಕರ್ ರೆಡ್ಡಿ ಸ್ಟೆಡಿಯಂ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್ ಪಂದ್ಯದಲ್ಲಿ ನಗರದ ಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಬಾಲಕಿಯರ ಸ್ಪರ್ಧೆಯಲ್ಲಿ : 6 ವರ್ಷದ ತ್ರಿಶಾ – ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,7 ವರ್ಷದ ವೃತಿಕಾ-25 ಕೆಜಿ- ಕುಮತೆ ಮತ್ತು ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,7 ವರ್ಷದ ಹನ್ವಿತಾ – ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
11 ವರ್ಷದ ಪ್ರತಿಕ್ಷಾ – ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,14-15 ವರ್ಷದ ಜಾನ್ಹವಿ -55 ಕೆಜಿ- ಕುಮತೆ ಮತ್ತು ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,13 ವರ್ಷದ ಪ್ರತ್ಯುಶಾ -ಕಟಾ ಸ್ಪರ್ಧೆಯಲ್ಲಿ ತೃತಿಯ ಸ್ಥಾನ,
13 ವರ್ಷದ ಸುನಿಕ್ಷಾ – ಕಟಾ ಸ್ಪರ್ಧೆಯಲ್ಲಿ ತೃತಿಯ ಸ್ಥಾನವನ್ನು ಪಡೆದಿದ್ದಾರೆ
ಬಾಲಕರ ಸ್ಪರ್ಧೆಯಲ್ಲಿ: 10 ವರ್ಷದ ಮುನಿಪ್ರಿಯಾನಶ-ಕಟಾ ದ್ವಿತೀಯ ಸ್ಥಾನ ,11 ವರ್ಷದ ಅಭಿನವ -35 ಕೆಜಿ ಕುಮತೆ ಪ್ರಥಮ ಸ್ಥಾನ ,13 ವರ್ಷದ ಸೈಫುಲ್ -50 ಕೆಜಿ ಕುಮತೆ ಪ್ರಥಮ ಸ್ಥಾನ,14-15 ವರ್ಷದ ಸೋಹನ -ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,12 ವರ್ಷದ ಸೃಜಲ-ಕಟಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ,
11 ವರ್ಷದ ಅಮರ ಬಿ ಬ್ಲ್ಯಾಕ್ ಬೇಲ್ಟ್ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥ ಬಸವರಾಜ ತಳಕೇರಿ, ಕರಾಟೆ ತರೆಬೆತಿದಾರರಾದ ಕೃಷ್ಣಾ ಗೌಳಿ, ಮಣಿಕಂಠ ಜುಮ್ಮಣ್ಣಾ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.