Home ಜಿಲ್ಲೆ ಪ್ರತಿ ಟನ್‍ಗೆ ರೂ .5,500 ನಿಗದಿಪಡಿಸದಿದ್ದರೆ ಆ.13ರಂದು ರಾಷ್ಟ್ರೀಯ ಹೆದ್ದಾರಿ ಬಂದ್: ಸುಬೇದಾರ

ಪ್ರತಿ ಟನ್‍ಗೆ ರೂ .5,500 ನಿಗದಿಪಡಿಸದಿದ್ದರೆ ಆ.13ರಂದು ರಾಷ್ಟ್ರೀಯ ಹೆದ್ದಾರಿ ಬಂದ್: ಸುಬೇದಾರ

ಬೀದರ್: ಕಬ್ಬಿಗೆ ಪ್ರತಿ ಟನ್‍ಗೆ 5,500 ರೂ. ಬೆಲೆ ನಿಗದಿಪಡಿಸಬೇಕು. ತಮ್ಮ ಬೇಡಿಕೆಗಳು ಈಡೇರದಿದ್ದರೆ 13ನೇ ತಾರೀಖಿನಂದು ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ ಸುಬೇದಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಬ್ಬಿಗೆ ಪ್ರತಿ ಟನ್‍ಗೆ ₹5,500 ಎಫ್‍ಆರ್‍ಪಿ (ಈಖP) ದರವನ್ನು ನಿಗದಿ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು, ರೈತರಿಗೆ ಅನುಕೂಲವಾಗುವಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ ನಿರಂತರವಾಗಿ 10 ರಿಂದ 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಹಳೆಯ ಬಾಕಿ ಹಣವನ್ನು ಕಡ್ಡಾಯವಾಗಿ 14 ದಿನಗಳ ಒಳಗಾಗಿ ಪಾವತಿಸಬೇಕು. ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗುವ ವರೆಗೆ ಯಾವುದೇ ಸಕ್ಕರೆ ಕಾರ್ಖಾನೆಗಳು ಕಾರ್ಯಾಚರಣೆ ಆರಂಭಿಸಬಾರದು ಮತ್ತು ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಬಾರದು ಎಂದು ಕರೆ ನೀಡಿದರು.ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡುವಾಗ ರೈತರಿಗೆ ಭಾರೀ ಪ್ರಮಾಣದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕಬ್ಬು ಕಟಾವು ಮಾಡಿದ ನಂತರ 14 ದಿನಗಳ ಒಳಗಡೆ ರೈತರಿಗೆ ಹಣ ಪಾವತಿ ಮಾಡಬೇಕು. ಹಣ ಪಾವತಿ ವಿಳಂಬವಾದಲ್ಲಿ 15% ಬಡ್ಡಿ ಸಮೇತ ರೈತರಿಗೆ ಹಣ ನೀಡಬೇಕು 9.25% ರಿಕವರಿ 5500. ರೂ. ದರ ನಿಗದಿಪಡಿಸಬೇಕು, ಸಕ್ಕರೆ ಇಳುವರಿ ತೆಗೆಯುವ ಸಂದರ್ಭದಲ್ಲಿ ಕಾರ್ಖಾನೆಯೂ ರೈತರ ಹಾಗೂ ಸಂಘಟನೆಯ ಪದಾಧಿಕಾರಿಗಳನ್ನು ಹೋಬಳಿ ಮಟ್ಟದ ಮುಖಂಡರ ಸಮಿತಿ ಮಾಡಿ ಅವರ ಸಮ್ಮುಖದಲ್ಲಿ ಸಕ್ಕರೆ ಇಳುವರಿ ತೆಗೆಯಬೇಕು, ಕಬ್ಬಿನಿಂದ ಕೇವಲ ಸಕ್ಕರೆ ಮಾತ್ರವಲ್ಲ ಉಪ ಉತ್ಪನ್ನಗಳಾದ ಎಥನಾಲ, ಮೂಲಾಸೆಸ್, ಪ್ರಾಸ್‍ಮೆಟ್ (ಕಬ್ಬಿನ ತ್ಯಾಜ್ಯ) ಬಗ್ಯಾಸೆಸ್ ಹಾಗೂ ಉದ್ಯುತ್ ಇವುಗಳಿಂದಲೂ ಕಾರ್ಖಾನೆಗೂ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ ಆದರೆ ಕೇವಲ ಸಕ್ಕರೆಯ ಬೆಲೆಯಿಂದ ಮಾತ್ರ ಈ.ಖ.P. ಯನ್ನು ನಿರ್ಧರಿಸಬಾರದು. ಇನ್ನುಳಿದ ಆದಾಯದಿಂದಲೂ ನಿರ್ಧರಿಸಬೇಕು, ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯೇ ಭರಿಸಬೇಕು. ಕಬ್ಬು ಕಟಾವು ಕಾರ್ಮಿಕರು ರೈತರಿಂದ ಹೆಚ್ಚುವರಿಯಾಗಿ 8-10 ಸಾವಿರ ರೂಪಾಯಿಗಳನ್ನು ಪಡೆಯುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಕಾರ್ಖಾನೆಯೇ ಕೂಲಿ ಕೊಡಬೇಕು, ಕಬ್ಬು ಕಟಾವು ನಂತರ ತೂಕದಲ್ಲಿ ಮೋಸವನ್ನು ತಡೆಗಟ್ಟಲು ಎಲ್ಲಾ ಂ.P.ಒ.ಅ ಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಸರ್ಕಾರದಿಂದಲೇ ನಿರ್ಮಿಸಬೇಕು. ಉತ್ತರಪ್ರದೇಶ 400. ಉತ್ತರಖಂಡ 365, ರಾಜ್ಯಗಳು ರೈತರಿಗೆ ಪೆÇ್ರೀತ್ಸಾಹ ಧನ ನೀಡುತ್ತಿದ್ದು, ಅದರಂತೆ ಕರ್ನಾಟಕದಲ್ಲೂ ಜಾರಿಯಾಗಬೇಕು, ಅಂಅP (ಅommissioಟಿ ಜಿoಡಿ ಚಿgಡಿiಛಿuಟಣuಡಿe ಛಿಚಿsಣ ಚಿಟಿಜ ಠಿಡಿiಛಿe) & 3 ಆಯೋಗ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಎಲ್ಲಾ ಬೆಳೆಗಳಿಗೆ ಸಂಬಂಧಿಸಿದಂತೆ ನೈಜ ಖರ್ಚು ವೆಚ್ಚಗಳ ವರದಿ ನೀಡಬೇಕು, ಅಂಅP ಸಮಿತಿಯು ರೈತರಿಗೆ ಬೆಳೆಗಳಿಗೆ ತಗಲುವಂತ ನೈಜ ಖರ್ಚು ವೆಚ್ಚ ಹಾಗೂ ಭೂಮಿಯ ಬಾಡಿಗೆಯನ್ನು ನೀರಾವರಿ ಸಾಲದ ಬಡ್ಡಿಯನ್ನು ಒಳಗೊಂಡು ವರದಿ ನೀಡಬೇಕು, ಕೇಂದ್ರ ಸರ್ಕಾರವು ಹುಬ್ಬಳ್ಳಿಯ ಹೋರಾಟದ ಪರಿಣಾಮವಾಗಿ ಈ ತಿಂಗಳ 12ರಂದು ಪ್ರಮುಖ ಸಭೆ ದೆಹಲಿಯ ಕೃಷಿ ಭವನದಲ್ಲಿ ಆಯೋಜಿಸಿದ್ದು, ಆ ಸಭೆಯಲ್ಲಿ ಈ ಮೇಲ್ಕಂಡ ಎಲ್ಲಾ ಹಕ್ಕೊತ್ತಾಯಗಳು ಜಾರಿ ಮಾಡದಿದ್ದಲ್ಲಿ ಮರುದಿನ ದಿ: 13.10.2026 ರಂದು ಕರ್ನಾಟಕ ಮತ್ತು ಮಹಾರಾಷ್ಟ್ರ ಇನ್ನಿತರ ರಾಜ್ಯಗಳಲ್ಲಿ ನಮ್ಮ ಕ.ರಾ.ರೈ.ಸಂ. ಹಸಿರು ಸೇನೆ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅನಿರ್ಧಿಷ್ಟವಾಗಿ ಬಂದ್ ಮಾಡಿ ನಿರಂತರ ಹೋರಾಟ ಮಾಡುತ್ತೇವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆನೀಡುತ್ತೇವೆಂದು ಸುಬೇದಾರ ಹೇಳಿದರು.
ಗುರ್ಲಾಪೂರದಲ್ಲಿ ನಡೆಯುವ ಹೋರಾಟದ ಅಂತಿಮ ನಿರ್ಣಯವಾಗುವ ವರೆಗೆ ಕಾರ್ಖಾನೆಗಳು ಆರಂಭಿಸಬಾರದು. ಆರಂಭಿಸಿದರೆ ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತ ಸರ್ಕಾರ ಹಾಗೂ ಕಾರ್ಖಾನೆಯೇ ನೇರಹೊಣೆಯಾಗಬೆಏಕಾಗುತ್ತದೆ ಎಂದು ಎಚ್ಚರಿಸಿದರು.
ತೊಗರಿ ಒಂದು ಕ್ವಿಂಟಾಲ್‍ಗೆ 15,000 ರೂ. ನಿಗದಿ ಪಡಿಸಬೇಕು, ಭತ್ತಕ್ಕೆ ಒಂದು ಕ್ವಿಂಟಲ್‍ಗೆ 5,000 ರೂ. ನಿಗದಿಪಡಿಸಬೇಕು, ಹತ್ತಿ ಒಂದು ಕ್ವಿಂಟಲ್‍ಗೆ 15,000 ರೂ. ನಿಗದಿಪಡಿಸಬೇಕು, ಬೆಳೆಗಳಿಗೆ ಡಾ॥ ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ದರ ನಿಗದಿಯಾಗಬೇಕು ಎಂದು ಸುಬೇದಾರ ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಾರೆಡ್ಡಿ ಮುರಾಳ ಯಾದಗಿರಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಮುಸ್ಟೋರು, ಯುವ ಮೋರ್ಚಾ ಸಂಗುರೆಡ್ಡಿ ಕನ್ಕಟ್ಟಾ ಪದಾಧಿಕಾರಿಗಳಾದ ಸಿಕೇಶ ರೆಡ್ಡಿ, ಸಂತೋಷ ಶೇಡೋಳೆ, ಸಂಜು ರೆಡ್ಡಿ ಆಣ್ಣದೂರ , ಸುಶಾಂತ್ ರೆಡ್ಡಿ ಆಣ್ಣದೂರ ಸುರೇಶ್ ರೆಡ್ಡಿ, ಬಸವಕುಮಾರ ಪಾಟೀಲ್, ಅಶೋಕ್ ಪಾಟೀಲ್ ನಿರ್ಣಾ, ಶಾಜಿದ ಬಿರಾದರ್, ತುಕಾರಾಮ ಗೊಳ್ಳೆ, ಪಾಂಡು ರೆಡ್ಡಿ, ಗೋವಿಂದ ರಡ್ಡಿ, ಜೈಪಾಲ್ ರೆಡ್ಡಿ ,ಉಪಸ್ಥಿತರಿದ್ದರು.