Home ಜಿಲ್ಲೆ ಬೆಂಗಳೂರು ಶಾಲೆಗಳ ಮೂಲಕ ರಾಷ್ಟ್ರ ನಿರ್ಮಾಣ

ಶಾಲೆಗಳ ಮೂಲಕ ರಾಷ್ಟ್ರ ನಿರ್ಮಾಣ

filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:8; brp_del_th:0.0016,0.0000; brp_del_sen:0.1000,0.0000; motionR: 65537; delta:1; bokeh:1; module: photo;hw-remosaic: false;touch: (-1.0, -1.0);sceneMode: 8388608;cct_value: 0;AI_Scene: (-1, -1);aec_lux: 254.71722;aec_lux_index: 0;albedo: ;confidence: ;motionLevel: 65537;weatherinfo: weather?null, icon:null, weatherInfo:100;temperature: 39;zeissColor: bright;

ಆನೇಕಲ್, ಸೆ. ೨೧: ದೇಶದಲ್ಲಿ ಸಾಕ್ಷರತೆಯ ಪ್ರಮಾಣ ೯೦% ಹೆಚ್ಚಾಗಿದಿಯಾ ದರೂ ವಿದ್ಯಾವಂತರಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಕಲಿಸಿದಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.


ಅವರು ಬಿದರಗುಪ್ಪೆ ಗ್ರಾಮದ ಅರೇನೂರು ರಸ್ತೆಯಲ್ಲಿರುವ ಬಿ.ಆರ್.ಎಸ್. ಗ್ಲೋಬಲ್ ಸ್ಕೂಲ್ ಆವರಣದಲ್ಲಿ ಡಾ. ಗೋವಿಂದಪ್ಪ ಮತ್ತು ಡಾ. ಮುನಿರೆಡ್ಡಿಗಳ ನೇತೃತ್ವದಲ್ಲಿ ಸಾಗರ್ ಆಸ್ಪತ್ರೆಗೆ ಮತ್ತು ವಿವಿಧ ವೈದ್ಯಕೀಯ ತಂಡಗಳಿಗೆ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. “ನಾವು ಎಷ್ಟು ಪದವಿಯನ್ನು ಗಳಿಸಿಹೇವು ಎಂಬುದು ಮುಖ್ಯವಲ್ಲ; ನಮ್ಮ ಓದು ಎಷ್ಟು ಮನೆಗಳಲ್ಲಿ ನಂದಾದೀಪ ಬೆಳಗಿದೆ ಎಂಬುದು ಬಹಳ ಮುಖ್ಯವಾಗಿದೆ” ಎಂದರು. “ದೇಶವನ್ನು ಕಟ್ಟಬೇಕಾದರೆ ಶಾಲೆಗಳನ್ನು ಕಟ್ಟಬೇಕು” ಎಂದೂ ಹೇಳಿದರು.


“ಈಗಾಗಲೇ ವೈದ್ಯಕೀಯ ಕ್ಷೇತ್ರ ವ್ಯಾಪಾರೀಕರಣವಾಗಿದೆ, ಇದರಿಂದ ಸಮಾಜದ ಅಭಿವೃದ್ದಿಗೆ ಮಾರಕವಾಗಿದೆ. ವೈದ್ಯರು ರೋಗಿಯ ಆರ್ಥಿಕ ಮಟ್ಟವನ್ನು ಅರ್ಥ ಮಾಡಿಕೊಂಡು ಚಿಕಿತ್ಸೆಯನ್ನು ನೀಡಬೇಕಾಗಿದೆ. ಸುಖಾಸುಮ್ಮನೆ ಜನರನ್ನು ಸುಲಿಗೆ ಮಾಡಬೇಡಿ. ಜೊತೆಗೆ ರೋಗಿಗೆ ನೀಡುವ ಚಿಕಿತ್ಸೆ ಬಗ್ಗೆ ಸತ್ಯ ಸಾಧ್ಯತೆಯನ್ನು ಪೋಷಕರಿಗೆ ತಿಳಿಸಬೇಕು. ತಪ್ಪು ಮಾಹಿತಿಯನ್ನು ನೀಡಬಾರದು” ಎಂದರು.


“ವೈದ್ಯಕೀಯ ಕ್ಷೇತ್ರದಲ್ಲಿ ತಾಯಿಯ ಹೃದಯ ಮತ್ತು ಮಗುವಿನಂತಹ ಮನಸ್ಸು ಇದ್ದಾಗ ವೃತ್ತಿಯಲ್ಲಿ ಕೆಲಸ ಮಾಡಲು ಸಾಧ್ಯ. ಜನರ ನಿರೀಕ್ಷೆಗಳು ಬದಲಾಗಿದೆ, ಆದರೆ ಕಾಲ ಬದಲಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಸೇವಾ ಕಾರ್ಯಕ್ರಮಗಳಲ್ಲಿ ಕೈಜೋಡಿಸಬೇಕು” ಎಂದರು.


“ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ದೊರೆಯಬೇಕು ಎಂಬ ಆಶಯದೊಂದಿಗೆ ಆರೋಗ್ಯ ಶಿಬಿರಗಳು ಜನಸಾಮಾನ್ಯರ ಆರೋಗ್ಯ ರಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದರು.


ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಬಮೂಲ್ ಮಾಜಿ ಅಧ್ಯಕ್ಷ ಬಿ.ಜೆ. ಆಂಜಿನಪ್ಪ, ಬಿ.ಆರ್.ಎಸ್. ಗ್ಲೋಬಲ್ ಸ್ಕೂಲ್ ಮುಖ್ಯಸ್ಥ ರಾಜಶೇಖರ್ ರೆಡ್ಡಿ ಮತ್ತು ಬಾಗ್ಯ ರಾಜಶೇಖರ್ ರೆಡ್ಡಿ, ಮುಖಂಡರಾದ ಎಸ್.ಆರ್.ಟಿ. ಅಶೋಕ್ ರೆಡ್ಡಿ, ಕೆ.ವಿ. ಶಿವಪ್ಪ, ಹುಲ್ಲಳ್ಳಿ ಶ್ರೀನಿವಾಸ್, ನಾಯನಹಳ್ಳಿ ಮುನಿರಾಜು ಗೌಡ, ಬೋಜರಾಜು ಮತ್ತು ಸ್ಥಳೀಯ ಮುಖಂಡರುಗಳು, ಸಾಗರ್ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.