
ಕೆ.ಆರ್.ಪುರ, ಸೆ. ೨೧- ಮಾಜಿ ಶಸಕರಾದ ಹೆಚ್. ಎಂ. ರಮೇಶ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ, ಬಾಬುಸಾಪಾಳ್ಯ ವಾರ್ಡ ೪ರಲ್ಲಿ ವಿವಿಧ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಅನ್ನದಾನ ಕಾರ್ಯಕ್ರಮ, ಪೌರಕಾರ್ಮಿಕರಿಗೆ ಸೀರೆ ವಿತರಣೆ ಹಾಗೂ ಸಾರ್ವಜನಿಕರಿಗಾಗಿ ಉಚಿತ ಫುಟ್ ಪಲ್ಸ್ ಥೆರಪಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ನಗರ ಹಾಗೂ ಬಡಾವಣೆಗಳ ಸ್ವಚ್ಛತೆಗಾಗಿ ಪ್ರತಿದಿನ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಸ್ಮರಿಸಿ, ಅವರಿಗೆ ಗೌರವಪೂರ್ವಕವಾಗಿ ಸೀರೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಬಾಬುಸಾಪಾಳ್ಯ ವಾರ್ಡ ೪ ಜೆಡಿಎಸ್ ಆಕಾಂಕ್ಷಿ ದಿವ್ಯಾ ಶಿವಕುಮಾರ್ ಮುಖಂಡರಾದ ಶಿವಕುಮಾರ್ ಗೌಡ ಜೆಡಿಎಸ್ ನಾಯಕರು, ಬಾಬುಸಾಪಾಳ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನದಾನ ಮಾಡಲಾಯಿತು ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಫುಟ್ ಪಲ್ಸ್ ಥೆರಪಿ ಸೇವೆಯನ್ನು ಒದಗಿಸಲಾಯಿತು.
ಕಾರ್ಯಕ್ರಮದಲ್ಲಿಗ್ರೇಟರ್ ಬೆಂಗಳೂರು ಜೆಡಿಎಸ್ ಕಾರ್ಯಾಧ್ಯಕ್ಷರಾದ ತುಳಸಿರಾಮ್ ,ಕೆ.ಆರ್. ಪುರಂ ಜೆಡಿಎಸ್ ಅಧ್ಯಕ್ಷ ಲಕ್ಷ್ಮಣ್ ,ಮುಖಂಡರಾದ ರಮೇಶ್ ಗೌಡ, ಸಂಧ್ಯಾ ಜಯಶೀಲ ಕುಮಾರ್ ಹಾಗೂ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಪೌರಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
































