Home ಜಿಲ್ಲೆ ಬೆಂಗಳೂರು ಶಾಲಾ ಬಸ್ ಹರಿದು ತಾಯಿ ಸಾವು, ಪುತ್ರಿ ಪಾರು

ಶಾಲಾ ಬಸ್ ಹರಿದು ತಾಯಿ ಸಾವು, ಪುತ್ರಿ ಪಾರು

ಬೆಂಗಳೂರು,ಜೂ.೧೩-ವೇಗವಾಗಿ ಬಂದ ಶಾಲಾ ಬಸ್ ಮಗಳನ್ನು ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದೊಯ್ಯುತ್ತಿದ್ದ ತಾಯಿ ಸ್ಕಿಡ್ ಆಗಿ ಬಿದ್ದಾಗ ಹರಿದು ಸಾವನ್ನಪ್ಪಿರುವ ದಾರುಣ ಘಟನೆ ವೈಟ್‌ಫೀಲ್ಡ್ ಸಿದ್ಧಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ವೈಟ್‌ಫೀಲ್ಡ್ ನ ತಾಯಿ ಕಾಂತಾ(೪೬) ಮೃತಪಟ್ಟವರು, ಗಾಯಗೊಂಡ ಮಗಳು ನೇಹಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಕೂಟರ್ ನಲ್ಲಿ ಮಗಳು ನೇಹಾಳನ್ನು ಕಾಲೇಜಿಗೆ ಬೆಳಿಗ್ಗೆ ಕರೆದುಕೊಂಡು ಬೆಳಿಗ್ಗೆ ಮಾರತ್ತಹಳ್ಳಿಯಿಂದ ಸಿದ್ದಾಪುರ ಕಡೆ ಹೋಗುತ್ತಿದ್ದಾಗ ಶಾಲಾ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ತಾಯಿ ಕಾಂತಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ, ನೇಹಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳೆ ಬಿದ್ದ ಕಾರಣ ರಸ್ತೆಯಲ್ಲಿದ್ದ ಗುಂಡಿಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ಈ ದುರ್ಘಟನೆ ಸಂಭವಿಸಿದೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.