
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಕೇಂದ್ರ ಚುನಾವಣೆ ಆಯೋಗ ಕರ್ನಾಟಕದಲ್ಲಿ ಜಾರಿಗೊಳಿಸುತ್ತಿರುವ ಎಸ್ಐಆರ್ ವಿರೋಧಿಸಿ
ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ ದಿಂದ ಜೂ.17 ರಾಜ್ಯಾದ್ಯಂತ ಜನಜಾಗೃತಿ ಜಾಥಾ ಹಾಗೂ ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿ-ರೋಧ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನ ಪರ ಸಂಘಟನೆ ಒಕ್ಕೂಟದ ಸಂಚಾಲಕ ಹುರುಕಡ್ಡಿ ಶಿವಕುಮಾರ್ ತಿಳಿಸಿದರು.
ಪಟ್ಟಣದ ಬೀದಿ ಬದಿ ವ್ಯಾಪಾರಿ ಘಟನೆಯ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಐಆರ್ ಪ್ರಕ್ರಿಯೆ ಕುರಿತು ಪ್ರತಿಭಟನೆ ಹಮ್ಮಿಕೊಳ್ಳುವ ಜನಜಾಗೃತಿ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಬಡ ಹಾಗೂ ಕೊನೆ ಅಂಚಿನ ಸಮುದಾಯಗಳ ಮತದಾನದ
ಹಕ್ಕಿಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯು ಸಿಎಎ ಹಾಗೂ ಎನ್ಆರ್ಸಿ ಮಾದರಿಯ ಕ್ರಮಗಳಿಗೆ ದಾರಿ ಮಾಡಿಕೊಡುವ ಪ್ರಯತ್ನವಾಗಿದೆ ಎಂದರು
ಎಸ್ಐಆರ್ ಚಾರಿಗೊಂಡ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿದಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಲಾಜಿಕಲ್ ಡಿಸ್ಟ್ರಿಬೆನ್ಸಿ ಸಾಫ್ಟ್ವೇರ್ ಬಳಕೆ ನಿಲ್ಲಿಸುವುದು. ಗ್ರಾಮಸಭೆಗಳ ಮೂಲಕ ಸಾರ್ವಜನಿಕ ಪರಿಶೀಲನೆ ನಡೆಸುವುದು. ಪಾರದರ್ಶಕವಾಗಿ ಪಟ್ಟಿಯನ್ನು ಪ್ರಕಟಿಸುವುದು ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ತಿಳಿಸಿದರು.
ಮೇ 30ರಂದು ರಾಜ್ಯದ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದರು.
ಜೂನ್ 18ರಂದು ಜಾಥಾ ಮುಕ್ತಾಯಗೊಳ್ಳಲಿದೆ. ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿರೋಧ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಸದಸ್ಯರು ತಿಳಿಸಿದರು. ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ್ ಯು. ಮಂಜುನಾಥ್, ರೋಷನ್, ಹುಸೇನ್, ಕೆಆರ್ಎಸ್ ಗಣೇಶ್ ಹರಕುಣಿ, ತಂಬ್ರಳ್ಳಿ ರವಿ, ಅಮೀನುದ್ದೀನ್, ಜಯಸೂರ್ಯ ಎ.ನಾಗರಾಜ್, ಇರ್ಫಾನ್ ಪಠಾಣ್, ಡಿ.ಎಂ. ಪೂಜಾರ್ ರಾಜಭಕ್ಷಿ, ಅನಂತ ಪ್ರಶಾಂತ ಹತ್ತಿ, ಕೆ.ಶಾಬೂದ್ದಿನ್ ಇತರರು ಇದ್ದರು.


























