
ಲಕ್ಷೆ÷್ಮÃಶ್ವರ,ಆ೪: ತಾಲೂಕಿನ ಹರದಗಟ್ಟಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿಶೇಷವಾದ ಮತ್ತು ನೂತನವಾದ ಅತಿಥಿ ಪಕ್ಷಿಗಳು ಕಾಣಿಸಿಕೊಂಡಿದ್ದು ಈ ಪ್ರದೇಶದಲ್ಲಿ ಸಾಕಷ್ಟು ಅನೇಕ ರೀತಿಯ ಪಕ್ಷಿಗಳು ಕಂಡುಬರುತ್ತವೆ ಎಂದು ಛಾಯಾಗ್ರಹಕ ಮತ್ತು ಪತ್ರಕರ್ತ ಸುರೇಶ ಲಮಾಣಿ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ಹಾರ್ನ್ ಬಿಲ್ ಎಂಬ ಸುಂದರವಾದ ಪಕ್ಷಿ ಹಾರಾಡುತ್ತಿದ್ದ ವೇಳೆ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಇದು ಮಲೆನಾಡು ಮತ್ತು ವಿಶೇಷವಾಗಿ ನಾಗಾಲ್ಯಾಂಡ್ ಹಿಮಾಚಲ ಪ್ರದೇಶದಲ್ಲಿ ಕಂಡುಬರುವ ಪಕ್ಷಿಯಾಗಿದೆ.
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಯವರು ಈ ಭಾಗದಲ್ಲಿ ಈ ಪಕ್ಷಿಗಳು ಕಾಣಿಸಿಕೊಳ್ಳುವುದು ಅಪರೂಪ ಮಲೆನಾಡು ಮತ್ತು ಕೆಲವು ರಾಜ್ಯಗಳಲ್ಲಿ ಮಾತ್ರ ಈ ಸುಂದರವಾದ ಹಾರ್ನ್ ಬಿಲ್ ಪಕ್ಷಿ ಕಂಡುಬAದಿರುವುದು ಅಚ್ಚರಿ ಮತ್ತು ವಿಸ್ಮಯವಾಗಿದೆ ಎಂದು ಹೇಳಿದರು.
ಈ ಉದ್ದು ಚಿಂಚನ ಹಳದಿ ಮತ್ತು ಕಂದು ಮಿಶ್ರಿತ ಮತ್ತು ರೆಕ್ಕೆ ಕೆಳಭಾಗದಲ್ಲಿ ಚಾಕಲೇಟ್ ಬಣ್ಣ ಹೊಂದಿದ್ದು ಅತ್ಯಂತ ಸುಂದರವಾಗಿ ಕಾಣುವ ಈ ಪಕ್ಷಿ ಕೊಕ್ಕರೆಯಂತೆ ಕಾಣುತ್ತಿದ್ದರು ವಿಶೇಷವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಪಕ್ಷಿಧಾಮದಲ್ಲಿ ಈ ಪಕ್ಷಿಗಳು ಕಾಣಸಿಗುತ್ತವೆ ಎಂದು ಸುರೇಶ ಲಮಾಣಿ ಹೇಳುತ್ತಾರೆ.






























