Home ಜಿಲ್ಲೆ ಬೆಂಗಳೂರು ಗರ್ಭಿಣಿ ಸ್ತ್ರೀಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ

ಗರ್ಭಿಣಿ ಸ್ತ್ರೀಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ

ಚಿಕ್ಕಬಳ್ಳಾಪುರ.ಸೆ.೦೮-ಸಮಾಜದಲ್ಲಿ ಶ್ರೀಮಂತರು ಉದಾರ ಮನಸ್ಸು ಉಳ್ಳವರಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಆರೋಗ್ಯವಂತ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ತಿಳಿಸಿದರು.


ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲವ ಹಳ್ಳಿ ಎನ್ ರಮೇಶ್ ಸಮಾನ ಮನಸ್ಕರ ಸಂಸ್ಥೆ ವತಿಯಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕರ್ನಾಟಕ ಗ್ಯಾರಂಟಿ ಯೋಜನೆ, ಜಿಲ್ಲಾಧ್ಯಕ್ಷ ಎನ್. ರಮೇಶ್ ನೇತೃತ್ವದಲ್ಲಿ ಏರ್ಪಡಿಸಿದ್ದ ಗರ್ಭಿಣಿ ಸ್ತ್ರೀಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ಗರ್ಭಿಣಿ ಸ್ತ್ರೀಯರು ಮಾನಸಿಕವಾಗಿ ಸದೃಢ ಆಗಿರಬೇಕು ಹಾಗೂ ದೈಹಿಕವಾಗಿ ತಜ್ಞರ ಮಾರ್ಗದರ್ಶನದಂತೆ ವ್ಯಾಯಾಮದಲ್ಲಿ ತೊಡಗಿ ಕೊಳ್ಳಬೇಕು ಯಾವುದೇ ರೀತಿಯ ಆತಂಕ ಇಲ್ಲದೆ ಶಿಶುವಿಗೆ ಜನ್ಮ ನೀಡಬೇಕು ಎಂದು ಕರೆ ನೀಡಿದರು.


ಗರ್ಭಿಣಿಯರ ಗರ್ಭವಸ್ಥೆ ಸಮಯದಲ್ಲಿ ಸದಾಕಾಲ ಅವರು ನಿರಾತಂಕವಾಗಿ ನಿರ್ಮಲ ಮನಸ್ಸು ಉಳ್ಳವರಾಗಿ ಉತ್ತಮ ವಿಚಾರಗಳನ್ನು ಕೇಳುವಂತಹ ವಾತಾವರಣದಲ್ಲಿ ಇರಬೇಕು ಹಾಗೂ ವೈದ್ಯರ ಸೂಚನೆಯಂತೆ ಕಾಲಕಾಲಕ್ಕೆ ಅವರು ತಮ್ಮ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು ಎಂದು ಕಿವಿ ಮತ್ತು ಹೇಳಿದರು.


ಕಾರ್ಯಕ್ರಮದ ಆಯೋಜಕ ಎಲುವ ಹಳ್ಳಿ ಎನ್.ರಮೇಶ್ ಮಾತನಾಡಿ, ಪ್ರತಿ ವರ್ಷ ನಮ್ಮ ಕುಟುಂಬದ ವತಿಯಿಂದ ನಿರಂತರವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತೇವೆ ಎಂದರು.


ಇದೇ ಸಂದರ್ಭದಲ್ಲಿ ಗುರುರಾಜ ಕಲ್ಯಾಣ ಮಂಟಪದಲ್ಲಿ ಕೆಂಪೇಗೌಡ ವೈದ್ಯಕೀಯ ಕೇಂದ್ರದ ವೈದ್ಯರುಗಳು ಆಗಮಿಸಿ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಿ ಅವರು ಯಾವ ರೀತಿ ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ಆರೋಗ್ಯವಂತವಾಗಿ ರೂಪಿಸಿಕೊಳ್ಳಬೇಕು ಎಂದು ಅರಿವು ಮೂಡಿಸಿದರು.


ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಜಾತ್ಯತೀತವಾಗಿ ಧರ್ಮತೀತವಾಗಿ ೩೫೦ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡು ಅಯೋಜಿಕರಿಂದ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಉಡುಗೆಗಳನ್ನು ಪಡೆದುಕೊಂಡರು.ಕಾರ್ಯಕ್ರಮಕ್ಕೆ ಬಂದ ಸಾವಿರಕ್ಕೂ ಹೆಚ್ಚು ಮಂದಿಗೆ ಭರ್ಜರಿ ಬಾಳೆ ಎಲೆ ಹೋಳಿಗೆ ಊಟ ಏರ್ಪಡಿಸಿದ್ದು ವಿಶೇಷವೆನಿಸಿತು.


ಕಾರ್ಯಕ್ರಮದಲ್ಲಿ ಮುಖ್ಯಸ್ಥರುಗಳಾದ ಕೆಂಪೇಗೌಡ ಆಸ್ಪತ್ರೆಯ ಖ್ಯಾತ ವೈದ್ಯ ಜಯಂತಿ ಯುವ ಮುಖಂಡ ಎಲ್ಲವ ಹಳ್ಳಿಯ ಜನಾರ್ಧನ್ ಹೇಮಲತಾ ಜನಾರ್ದನ್ ಲಕ್ಷ್ಮಣ್ ಕಳವಾರ ಶ್ರೀಧರ್ ಒಳಗೊಂಡಂತೆ ಮತ್ತಿತರರು ಹಾಜರಿದ್ದರು.