
ಕಲಬುರಗಿ: ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ಮಹೇಬೂಬ ಸುಭಾನಿ ದರ್ಗಾದ ಜಾತ್ರೆ ಹಾಗೂ ಉತ್ಸವವು ಹಿಂದೂ, ಮುಸ್ಲಿಂ, ಲಮಾಣಿ ಸೇರಿದಂತೆ ವಿವಿಧ ಸಮುದಾಯದವರ ಸಹಭಾಗಿತ್ವದಲ್ಲಿ ಭಕ್ತಿಭಾವದಿಂದ ನೆರವೇರಿತು.
ಸೆ.೨೨ರಂದು ಮಂಗಳವಾರ ರಾತ್ರಿ ೧೧ ಗಂಟೆಗೆ ಅಬ್ದುಲ್ ಖಾದರ್ ಜೀಲಾನಿ ಅವರ ಮನೆಯಿಂದ ಮುಸ್ಲಿಂ ಕಮಿಟಿಯವರು ದರ್ಗಾಕ್ಕೆ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಸಮರ್ಪಿಸಿದರು. ಸೆ.೨೩ರಂದು ಬುಧವಾರವೂ ವಿವಿಧ ಕಮಿಟಿಗಳ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಮದ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಪಾಲ್ಗೊಂಡು ಜಾತ್ರೆ ಹಾಗೂ ಉತ್ಸವವನ್ನು ಯಶಸ್ವಿಗೊಳಿಸಿದರು. ಅಬ್ದುಲ್ ಮುತ್ಯಾರ್ ಅವರ ನೇತೃತ್ವ ಹಾಗೂ ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಕಾರ್ಯಕ್ರಮವನ್ನು ಸೌಹಾರ್ದಯುತವಾಗಿ ಆಯೋಜಿಸಲಾಯಿತು.
ಸುಮಾರು ೧೯೯೫ರಿಂದ ಆರಂಭವಾದ ಈ ಆಚರಣೆಗೆ ಇದೀಗ ೩೦ ವರ್ಷಗಳಾಗಿದ್ದು, ಗ್ರಾಮಸ್ಥರು ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತಾ ಪರಂಪರೆಯನ್ನು ಮುಂದುವರಿಸಿಕೊAಡು ಬರುತ್ತಿದ್ದಾರೆ ಎಂದು ಖೇಮಲಿಂಗಪ್ಪ ಜಮಾದಾರ ಬೇಳಮಗಿ ಅವರು ಪ್ರಕಟಣೆಯಲ್ಲಿ ತಿಳಿಸಿದರು.































