
ಚನ್ನಮ್ಮನ ಕಿತ್ತೂರ,ನ.೧೫: ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಮೂಲ್ಯ ಸೇವೆ ಹಾಗೂ ಸಾಧನೆ ಮೂಲಕ ಗುರುತಿಸಿಕೊಂಡಿರುವ ಕಿತ್ತೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಪ್ರತಿಶಿಷ್ಠಿತ “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಪರಿಶ್ರಮ ಜನಪರ ಕಾಳಜಿ, ಹಾಗೂ ಸಹಕಾರ ಮನೋಭಾವದಿಂದ ಸಮಾಜಕ್ಕೆ ನೀಡಿದ ಕೊಡುಗೆ ನಿಜಕ್ಕೂ ಶ್ಲಾಘನೀಯ. ಇವರ ಸಾಧನೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ದೊಡ್ಡಗೌಡರ ಅಭಿಮಾನಿ ಬಳಗ ಹಾರೈಸಿದೆ.





















