
ಬಸವಕಲ್ಯಾಣ: ಜಗತ್ತಿನ ಎಲ್ಲಾ ಶ್ರೇಷ್ಠ ಸಾಹಿತ್ಯಗಳಲ್ಲಿ ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದೆ. ಎಲ್ಲರನ್ನೂ ಅಪ್ಪಿಕೊಳ್ಳುವ ಧರ್ಮ ಲಿಂಗಾಯತ ಧರ್ಮವಾಗಿದೆ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಸ್ವಾಭಿಮಾನಿ ತತ್ವನಿಷ್ಠ ಶರಣರಿಂದ ಪಟ್ಟಣದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎA. ಬೇಗ್ ಕಲ್ಯಾಣ ಮಂಟಪದಲ್ಲಿ ಜರುಗುತ್ತಿರುವ ೨೫ನೇ ಕಲ್ಯಾಣ ಪರ್ವದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲೂ ವಚನಗಳ ಪ್ರಸ್ತುತತೆ ಕುಗ್ಗಿಲ್ಲ. ಸಮಾಜದಲ್ಲಿ ಶೋಷಣೆ, ಭ್ರಷ್ಟಾಚಾರ ಹಾಗೂ ಅಸಮಾನತೆ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಬಸವಾದಿ ಶರಣರ ‘ನುಡಿದಂತೆ ನಡೆ’ ಮತ್ತು ಎಲ್ಲರನ್ನೂ ತನ್ನತ್ತ ಸೆಳೆಯುವ “ಇವನಮ್ಮವ ಇವನಮ್ಮವ ಎಂದೆನಿಸಯ್ಯ” ಎಂಬ ತತ್ವ ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದೆ. ವಚನಗಳ ಅಧ್ಯಯನ ಮತ್ತು ಅವುಗಳ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
೧೨ನೆಯ ಶತಮಾನದ ಶರಣ ಚಳವಳಿ ಮತ್ತು ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದ ವೈಚಾರಿಕ ಇತಿಹಾಸದಲ್ಲೇ ಒಂದು ಅದ್ಭುತ ಮೈಲಿಗಲ್ಲು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ವೈಚಾರಿಕ ಹಾಗೂ ಸಾಮಾಜಿಕ ಚಳವಳಿಯು ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಹೊಸ ಸಮಾಜದ ನಿರ್ಮಾಣಕ್ಕೆ ಬಲಿಷ್ಠ ಅಡಿಪಾಯ ಹಾಕಿತು.
ದೇವರು ಈ ಜಗತ್ತಿಗೆ ಬಸವಣ್ಣನವರನ್ನು ನೀಡಿದರು. ಬಸವೇಶ್ವರರು ಅನುಭವ ಮಂಟಪ ನೀಡಿದರು. ಅನುಭವ ಮಂಟಪ ಶರಣರನ್ನು ನೀಡಿತು. ಶರಣರು ವಚನ ಸಾಹಿತ್ಯ ನೀಡಿದರು. ವಚನ ಸಾಹಿತ್ಯ ಮಾನವನಿಗೆ ಮಹಾದೇವನನ್ನಾಗಿ ಮಾಡಿತು ಎಂದು ಹಾರಕೂಡ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು ಪ್ರತಿಪಾದಿಸಿದರು.
ಪರ್ವದ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಇಸ್ಲಾಂ ಬಂಧುಗಳು ಪ್ರತಿದಿನ ನಮಾಜ್ ಮಾಡುವಂತೆ, ಕ್ರೈಸ್ತರು ವಾರಕ್ಕೊಮ್ಮೆ ಪ್ರಾರ್ಥನೆ ಮಾಡಿ ಧರ್ಮಪ್ರಚಾರ ಮಾಡುವಂತೆ ಲಿಂಗಾಯತ ಬಾಂಧವರು ಪ್ರಾರ್ಥನೆ ಮೂಲಕ ವಾರಕ್ಕೊಮ್ಮೆ ಸೇರಿ ಪ್ರಚಾರ ಮಾಡಬೇಕು. ಬೌದ್ಧ ಧರ್ಮಿಯರು ದೇಶ ವಿದೇಶಗಳಲ್ಲಿ ಸಂಚರಿಸಿ ಧರ್ಮ ಪ್ರಚಾರ ಮಾಡುವಂತೆ ಲಿಂಗಾಯತ ಮಠಾಧೀಶರು ಮಠಗಳಿಂದ ಹೊರಬಂದು ಬಸವ ತತ್ವವನ್ನು ವಿಶ್ವದ ತುಂಬೆಲ್ಲ ಪಸರಿಸಬೇಕಾಗಿದೆ. ಮುಂದಿನ ವರ್ಷ ಎಂಟನೇ ಅಂತರಾಷ್ಟ್ರೀಯ ಬಸವ ತತ್ವ ಸಮ್ಮೇಳನ ಸಿಂಗಾಪುರನಲ್ಲಿ ಆಯೋಜಿಸಲಾಗಿದೆ. ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ವಾಮೀಜಿ ಕರೆ ನೀಡಿದರು.
ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ ಅಂದು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅಂಗ ವಂಗ ಕಳಿಂಗ ಮತ್ತು ವಿದೇಶದಿಂದ ಶರಣರು ಕಲ್ಯಾಣಕ್ಕೆ ಬಂದು ಪಾವನಗೊಳಿಸಿದರು. ಹಾಗೆಯೇ ೨೦೦೨ ರಲ್ಲಿ ಮಾತೆ ಮಹಾದೇವಿಯವರು ಕಲ್ಯಾಣಕ್ಕೆ ಬಂದು ೧೦೮ ಬಸವ ಪುತ್ಥಳಿ, ಶರಣಗ್ರಾಮ ಸ್ಥಾಪಿಸಿ, ದೇಶ ವಿದೇಶಗಳಿಂದ ಭಕ್ತರು ಕಲ್ಯಾಣಕ್ಕೆ ಬರುವಂತೆ ಮಾಡಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುತ್ತಿರುವ ಪೂಜ್ಯ ಚನ್ನಬಸವಾನಂದ ಶ್ರೀಗಳು ಹಾಗೂ ಅವರ ಇಡೀ ತಂಡ ಇಂದು ಬಸವ ತತ್ವದ ಪ್ರಚಾರ ಪ್ರಸಾರಗೈಯುತ್ತಿರುವುದು ಶ್ಲಾಘನೀಯ ಎಂದರು.
ಇಂದು ಕೆಲವು ಮಠಾಧೀಶರಿಂದ ಬಸವ ತತ್ವ ಕಲುಷಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಜೈ ಬಸವ ಹೇಳುವವರ ಮುಂದೆ ಜೈ ಶ್ರೀರಾಮ ಕೂಗುವ ದ್ವೇಷ ಭಾವನೆ ಹರಡಿಸಲಾಗುತ್ತಿದೆ. ಬಸವಾಭಿಮಾನಿಗಳು ಎಚ್ಚರಗೊಳ್ಳಬೇಕಾಗಿದೆ ಎಂದರು.
ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ ಪೂಜ್ಯ ಲಿಂಗಾನAದ ಸ್ವಾಮಿಗಳ ಹಾಗೂ ಪೂಜ್ಯ ಮಾತಾಜಿಯವರ ಸತ್ ಸಂಕಲ್ಪದAತೆ ಸ್ವಾಭಿಮಾನಿ ಶರಣ ಮೇಳ ಕಲ್ಯಾಣ ಪರ್ವಗಳು ನಡೆಯುತ್ತಿವೆ. ಕಾರ್ಯಕರ್ತರು, ಕ್ರಿಯಾಮೂರ್ತಿಗಳು ಇನ್ನೂ ಹೆಚ್ಚು ಹೆಚ್ಚು ಬಸವಜ್ಯೋತಿ ಕಾರ್ಯಕ್ರಮಗಳು, ಮಾಸಿಕ ಶರಣ ಸಂಗಮ ಸೇರಿದಂತೆ ಮುಂತಾದ ಕಾರ್ಯಕ್ರಮ ಮಾಡಿಸುವ ಮೂಲಕ ಬಸವ ತತ್ವವನ್ನು ಜನರ ಮನಸಿನ ಹತ್ತಿರ ತೆಗೆದುಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಇದೇ ವೇಳೆ ಗಂಗಾವತಿ, ರಾಯಚೂರು, ಕಲಬುರಗಿ, ಹಂದ್ರಾಳು, ಬೆಳಗಾವಿ ಸೇರಿದಂತೆ ಸುಮಾರು ೨೫ ರಾ.ಬ.ದಳಗಳಿಗೆ ಅತ್ಯುತ್ತಮ ರಾಷ್ಟ್ರೀಯ ಬಸವ ದಳ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕು. ಸಮೃದ್ಧಿ ಅಶೋಕ ಲಾಧಾ ಅವರಿಂದ ವಚನ ನೃತ್ಯ ಜರುಗಿತು. ಕೊಪ್ಪಳ ಜಿಲ್ಲೆಯ ಬೆಟ್ಟಪ್ಪ ಅವರ ತಂಡದ ಕಲ್ಯಾಣ ಕ್ರಾಂತಿ ನಾಟಕ ಸಭೀಕರ ಗಮನ ಸೆಳೆಯಿತು. ಮಂಡ್ಯದ ಶಿವು ಜನ್ಯ ಅವರ ವಚನ ಗಾಯನ ಆನಂದದಲ್ಲಿ ತೇಲಾಡಿಸಿತು.
ಚಿಕ್ಕಮಗಳೂರಿನ ಪೂಜ್ಯ ಶ್ರೀ ಡಾ. ಜಯಬಸವಾನಂದ ಸ್ವಾಮೀಜಿ ಮಾತನಾಡಿದರು. ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ಷಟಸ್ಥಲ ಧ್ವಜಾರೋಹಣ, ಶರಣ ವಂದನೆ, ಶರಣರಿಗೆ ಶರಣಾರ್ಥಿ ಕಾರ್ಯಕ್ರಮ ಜರುಗಿತು. ವೇದಿಕೆ ಮೇಲೆ ನಿ. ಕೆಎಎಸ್ ಅಧಿಕಾರಿ ಎಸ್.ದಿವಾಕರ, ಹೈದರಾಬಾದನ ಮಧು ಇಟಕ್ಯಾಳ, ಭೀಮರಾವ ಬಿರಾದಾರ, ಬಸವರಾಜ ಸಂಗಮದ, ಗಣಪತಿ ಬಿರಾದಾರ, ಶಿವಶರಣಪ್ಪ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಮಲ್ಲಿಕಾರ್ಜುನ ಶಾಪುರ, ವಿಶ್ವನಾಥ ಪಾಟೀಲ ಗೋಂದೆಗಾAವ, ಮಲ್ಲಿಕಾರ್ಜುನ ಬುಕ್ಕಾ, ಸತೀಶ ಪಾಟೀಲ ಹಾರೂರಗೇರಿ, ಶ್ರೀದೇವಿ ಪಾಟೀಲ, ಸತೀಶ ಬೋರಬಂಡ, ಸಿದ್ರಾಮಪ್ಪ ರಾಯಚೂರು, ಸೇರಿದಂತೆ ಹಲವರಿದ್ದರು.























