
ಹುಬ್ಬಳ್ಳಿ,ಅ೨೬: ಬೆಳಗಾವಿ ಜಿಲ್ಲೆಯ ಸೌದತ್ತಿ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಶೀಗಿಹುಣ್ಣಿಮೆಯಂದು ಹಾಗೂ ದೀಪಾವಳಿ ಅಮಾವಾಸ್ಯೆವರೆಗೆ ಪ್ರತಿ ಮಂಗಳವಾರ,ಶುಕ್ರವಾರ ಹಾಗೂ ರವಿವಾರದಂದು ಹುಬ್ಬಳ್ಳಿ ಹಾಗೂ ನವಲಗುಂದದಿAದ ಯಲ್ಲಮ್ಮನ ಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಭಕ್ತಾದಿಗಳ ಮನವಿಯ ಮೇರೆಗೆ ಕಳೆದ ವರ್ಷ ಶೀಗಿ ಹುಣ್ಣಿಮೆಯಿಂದ ದೀಪಾವಳಿಯ ವರೆಗಿನ ಅವಧಿಯಲ್ಲಿ ಮಾಡಲಾಗಿದ್ದ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಶೇಷ ಬಸ್ಸುಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಯಾಣ ಮಾಡಿದ್ದಾರೆ. ಹುಬ್ಬಳ್ಳಿ ಹಾಗೂ ನವಲಗುಂದದಿAದ ನೇರವಾಗಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿಬರಲು ವಿಶೇಷ ಬಸ್ಸುಗಳಿಂದ ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾವಾಗಿದೆ. ಆದ್ದರಿಂದ ಈ ವರ್ಷವೂ ಸಹ ವಿಶೇಷ ಬಸ್ ಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿರುತ್ತದೆ. ಅದರಂತೆ ಶೀಗಿ ಹುಣ್ಣಿಮೆಯಂದು ಸೋಮವಾರ ಹಾಗೂ ದೀಪಾವಳಿ ಅಮಾವಾಸ್ಯೆವರೆಗೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಮಂಗಳವಾರದAದು ಅಂದರೆ ಅಕ್ಟೋಬರ್ ೨೬, ೨೭, ೩೦, ನವೆಂಬರ್ ೧,೩,ಹಾಗೂ ೬ ರಂದು ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶೇಷ ಬಸ್ ಸಂಚಾರ ಮಾರ್ಗಗಳು:
ಹುಬ್ಬಳ್ಳಿ- ಯಲ್ಲಮ್ಮನಗುಡ್ಡ:
ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ, ಅಮ್ಮಿನಭಾವಿ, ಸವದತ್ತಿ ಮಾರ್ಗವಾಗಿ ಸಂಚರಿಸುತ್ತವೆ.
ನವಲಗುAದ- ಯಲ್ಲಮ್ಮನಗುಡ್ಡ: ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರಗುಂಪಿ, ಅಳಗವಾಡಿ, ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.























