Home ಜಿಲ್ಲೆ ಸಂಪತ್ತು ಸ್ಥಿರವಾಗಿರಲು ಕೋಜಾಗರ ವ್ರತ

ಸಂಪತ್ತು ಸ್ಥಿರವಾಗಿರಲು ಕೋಜಾಗರ ವ್ರತ

ಸತ್ತೂರು,ಅ ೨೬: ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಶರತ ಪೂರ್ಣಿಮೆಯ ಮಹತ್ವವನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಶ್ರೀ ಕೃಷ್ಣ ಪರಮಾತ್ಮ ಗೋಪಿಕಾ ಸ್ತಿçà ಯರೊಂದಿಗೆ ರಾಸ ಕ್ರೀಡೆಯನ್ನಾಡಿದಂತಹ ಪೌರ್ಣಿಮೆ. ಇದು ಭಕ್ತಿಯ ಪರಾಕಾಷ್ಠೆಯ ಪ್ರತೀಕ. ಇದನ್ನೇ ಕೋಜಾಗರಿ ಹುಣ್ಣಿಮೆ ಎಂದು ಕರೆಯುತ್ತಾರೆ ಎಂದು ಡಾ. ಶ್ರೀ ಶಾಚಾರ್ಯ ನಾಮಾವಳಿ ಹೇಳಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ನಡೆದ “ಕೋಜಾಗರ ವೃತದ ವಿಶೇಷತೆ” ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತಾ ಭವಿಷ್ಯೋತ್ತರ ಪುರಾಣದಲ್ಲಿ ನಾರದರು ಪೃಥು ಮಹಾರಾಜನಿಗೆ ಈ ವೃತದ ಬಗ್ಗೆ ತಿಳಿಸುತ್ತಾ ಈ ಹುಣ್ಣಿಮೆಯಲ್ಲಿ , ಲಕ್ಷಿ÷್ಮÃದೇವಿ ಭೂಲೋಕವನ್ನು ಸಂಚಾರ ಮಾಡುತ್ತಾ, ಯಾರು ಈ ರಾತ್ರಿ ಭಕ್ತಿಯಿಂದ ನನ್ನ ಪೂಜೆ ಮತ್ತು ಜಾಗರಣೆ ಮಾಡುತ್ತಾರೋ ಅವರಿಗೆ ಸಕಲ ಸಂಪತ್ತನ್ನು ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿರುತ್ತಾಳೆ. ಅದೇ ” ಕೋ ಜಾಗರ್ತಿ ” ಅದೇ ಕೋಜಾಗರಿ ಎಂದು ಆಗಿದೆ. ಈ ದಿನ ಚಂದ್ರ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಇರುತ್ತಾನೆ. ಅವನ ಬೆಳದಿಂಗಳಲ್ಲಿ ಹಾಲು ಇಟ್ಟು ಆ ಹಾಲನ್ನು ಪಾನ ಮಾಡಿದರೆ ಅನೇಕ ರೋಗಗಳು ನಿವಾರಣೆಯಾಗುತ್ತವೆ ಎಂದು ವಿಶ್ವಾಸ. ಸಕಲ ಲೋಕಕ್ಕೆ ಲಕ್ಷಿ÷್ಮÃದೇವಿ ಸಕಲ ಅಭೀಷ್ಟಗಳನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಲೌಕಿಕ ಉದಾಹರಣೆಗಳೊಂದಿಗೆ ಸುಂದರವಾಗಿ ವಿಶ್ಲೇಷಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೇಶವ ಕುಲಕರ್ಣಿ, ಕೃಷ್ಣ ಹುನಗುಂದ, ಶ್ರೀನಿವಾಸ ಪಟ್ಟಣಕೊಡಿ, ಎಲ್. ವಿ. ಜೋಶಿ ,ಅನಿಲ ಪುರೋಹಿತ, ಪ್ರಕಾಶ ದೇಸಾಯಿ, ವೆಂಕಟೇಶ ಕುಲಕರ್ಣಿ, ರಂಗನಾಥ ಕಟ್ಟಿ, ಸಿ.ಕೆ. ಕುಲಕರ್ಣಿ, ವಿಲಾಸ ಸಬ್ನೀಸ, ಹನುಮಂತ ಪುರಾಣಿಕ , ಸಂಜೀವ ಗೊಳಸಂಗಿ ವಿಶ್ವನಾಥ ಕಾಂಗೋ, ಗೋಪಾಲಕೃಷ್ಣ ಹುನಗುಂದ, ಮುಂತಾದ ಬಳಗದ ಸದಸ್ಯರು ಉಪಸ್ಥಿತರಿದ್ದರು.