Home ಜಿಲ್ಲೆ ಐತಿಹಾಸಿಕ ಕಲ್ಯಾಣಿಯ ಸ್ವಚ್ಛತೆ

ಐತಿಹಾಸಿಕ ಕಲ್ಯಾಣಿಯ ಸ್ವಚ್ಛತೆ

ಲಕ್ಷೆ÷್ಮÃಶ್ವರ,ಅ೨೬ : ಪಟ್ಟಣದ ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀ ಲಕ್ಷಿ÷್ಮ ಲಿಂಗನಗುಡಿ ಹತ್ತಿರ, ಇರುವ ಐತಿಹಾಸಿಕ ಕಲ್ಯಾಣಿ (ಬಾವಿಯು ) ಗಿಡಗಂಟೆಗಳು ಬೆಳೆದು ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿತ್ತು ಕಾಲು ಇಡಲು ಜಾಗವಿಲ್ಲದೆ ಕಲ್ಯಾಣಿ ಮುಚ್ಚಿಹೋಗಿತ್ತು ವರ್ಷಗಳಿಂದ ಕಸಕಡ್ಡಿಗಳಿಂದ ಕೂಡಿದ್ದ ಕಲ್ಯಾಣಿಯನ್ನು ಸ್ವಚ್ಛತೆ ಗೊಳಿಸಬೇಕೆಂದು ಅಖಂಡ ಭಾರತ ಯುವ ಸೇನೆ ಕಾರ್ಯಕರ್ತರು ಹಾಗೂ ಪಬ್ಲಿಕ್ ವಾಯ್ಸ್ ೨೬, ಹಾಗೂ ಹಿಂದೂ ಕಾರ್ಯಕರ್ತರು ಕಲ್ಯಾಣಿಯನ್ನು ಸ್ವಚ್ಛತೆಗೊಳಿಸಿ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಈ ವೇಳೆ ಮಾತನಾಡಿದ ಅಖಂಡ ಭಾರತ ಯುವ ಸೇನೆಯ ಸದಸ್ಯರಾದ ಅಮರೀಶ ಗಾಂಜಿ, ಕಾರ್ತಿಕ ಕೂಸನೂರಮಠ, ಈ ಕಲ್ಯಾಣಿ ಐತಿಹಾಸಿಕ ಸ್ಥಳವಾಗಿದ್ದು ಸ್ಥಳೀಯ ಪುರಸಭೆ ಆಡಳಿತ ಮಂಡಳಿಯಿAದ ನಿರ್ಲಕ್ಷಕ್ಕೆ ಒಳಗಾಗಿತ್ತು ಈ ಬಗ್ಗೆ ಗಮನಕ್ಕೆ ತಂದರು ಎಚ್ಚೆತ್ತುಕೊಂಡಿದ್ದಿಲ್ಲ ಹೀಗಾಗಿ ಹಿಂದೂ ಧಾರ್ಮಿಕ ಸ್ಥಳಗಳ ರಕ್ಷಣೆಗೆ ಮುಂದಾಗಿದ್ದು ಸದಸ್ಯರೆಲ್ಲರೂ ಕೂಡಿಕೊಂಡು ಸ್ವಚ್ಛತೆ ಕಾರ್ಯ ಆರಂಭಿಸಿದ್ದೇವೆ ಇದಕ್ಕೆ ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.

ಅಖಂಡ ಭಾರತ ಯುವ ಸೇನೆ ಸದಸ್ಯರಾದ ಶ್ರೇಯಾಂಕ ಹಿರೇಮಠ,ಶರಣು ಗಾಂಜಿ, ಕಿರಣ ಮಹಾಜನಶೆಟ್ಟರ, ವಿಕಾಸ. ಮಹಾಜನಶೆಟ್ಟರ, ಸಾಗರ ಮೆಹರವಾಡೆ, ಸಂದೀಪ ಮಾಗಡಿ, ವಿಜಯ, ವಿಶಾಲ್ ಜಂಬಣ್ಣವರ, ಗಂಗಾಧರ ಸವಣೂರ,
ಕಾರ್ತಿಕ್ ನರೆಗಲ್, ವಿನಾಯಕ್ ಬಡಿಗೇರ ನೂರಾರು ಯುವಕರು ಇದ್ದರು.