Home ಜಿಲ್ಲೆ ಮಹರ್ಷಿ ವಾಲ್ಮೀಕಿ ಜಯಂತಿ

ಮಹರ್ಷಿ ವಾಲ್ಮೀಕಿ ಜಯಂತಿ


ನವಲಗುAದ,ಅ.೨೬: ಮಹರ್ಷಿ ವಾಲ್ಮೀಕಿಯವರು ಭಾರತೀಯ ಸಾಹಿತ್ಯ ಪರಂಪರೆಯ ಆದಿಕವಿಯಾಗಿದ್ದು, ಅವರು ರಚಿಸಿದ ರಾಮಾಯಣ ಮಹಾಕಾವ್ಯವು ಮಾನವೀಯ ಮೌಲ್ಯಗಳು, ಧರ್ಮನಿಷ್ಠೆ, ಸತ್ಯ, ತ್ಯಾಗ ಮತ್ತು ಕರ್ತವ್ಯಪ್ರಜ್ಞೆಯ ಮಹತ್ವವನ್ನು ಸಾರುತ್ತದೆ ಎಂದು ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ ನಾಗರತ್ನ ಕುರ್ಡೆಕರ ತಿಳಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಾಲ್ಮೀಕಿಯವರ ಆದರ್ಶಗಳನ್ನು ಇವತ್ತಿನ ಕಾಲಮಾನಕ್ಕೆ ಪ್ರಸ್ತುತವಾಗಿದ್ದು ಎಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ ಎಂ ಬಿ ಬಾಗಡಿ ಮಾತನಾಡಿ ವಾಲ್ಮೀಕಿಯವರ ಜೀವನವು ಆತ್ಮಪರಿವರ್ತನೆ, ಜ್ಞಾನಸಾಧನೆ ಮತ್ತು ಸತ್ಕಾರ್ಯಗಳ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬ ಸಂದೇಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ಯಾವತ್ತೂ ಸೋಲನ್ನು ಒಪ್ಪಿಕೊಳ್ಳದೆ ವ್ಯಕ್ತಿತ್ವ ಹೇಗೆ ರೂಪಿಸಿಕೊಳ್ಳಬಹದು ಎಂಬುವ ಪಾಠವನ್ನು ಮಹರ್ಷಿ ವಾಲ್ಮೀಕಿಯವರ ಜೀವನದಿಂದ ಕಲಿಯಬಹುದು ಎಂದರು.
ಎಲ್ಲ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಣೆ ಮಾಡಿದರು. ನಾಗಪ್ಪ ಸುರಳಿಕೇರಿ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜೋತಿಭಾ ದೊಡಮನಿ ವಂದನಾರ್ಪಣೆ ಮಾಡಿದರು.


ಕಾರ್ಯಕ್ರಮದಲ್ಲಿ ಸವಿತಾ ಚಿಕ್ಕಣ್ಣವರ, ಗಣೇಶ್ ಧೋoಗಡಿ, ಗಂಗಾಧರ ಗೌಡರ, ಸಮೀರ ನಧಾಪ,ಪ್ರತಿಭಾ ನಿಡಗುಂದಿ,ಡಾ ವೈ ಎನ್ ಗುಲಗಂದಿ, ಗುಡ್ಡಪ್ಪ ಹೊಂಕಣ, ನಿಂಗಪ್ಪ ವಂಕನ್ನವರ, ಶ್ರೀನಿವಾಸರೆಡ್ಡಿ ಹರ್ಲಾಪುರ, ಮಂಜುನಾಥ ಮಂಗೋಣಿ,ಭಾರತಿ ಭೋವಿ, ರವಿ ಬ್ಯಾಹಟ್ಟಿ, ಕಾವ್ಯ ಎಸ್ ಎನ್, ರಾಚನಗೌಡ ಚಿನಗೌಡರ್, ಪಿ ನಾಗತೇಜ, ರಮೇಶ್ ಚವ್ಹಾಣ ಮುಂತಾದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು