
ಚಿತ್ತಾಪುರ; ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಆ.31ರ ನಡುವಿನ ಸೋಮವಾರದಂದು ಜರುಗುವ ಐತಿಹಾಸಿಕ ದಂಡಗುಂಡ ಬಸವಣ್ಣನವರ ಜಾತ್ರೆ ಪ್ರಯುಕ್ತ ಚಿತ್ತಾಪುರ ಪೆÇಲೀಸ್ ಠಾಣೆ ವತಿಯಿಂದ ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು.
ನಂತರ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ದಂಡಗುಂಡ ಬಸವಣ್ಣನವರ ಜಾತ್ರೆ ಅದ್ಧೂರಿಯಾಗಿ ಜರುಗುತ್ತದೆ. ಕಳೆದ ಭಾರಿ ಏನೇಲ್ಲ ತಪ್ಪುಗಳಾಗಿವೆ. ಅವುಗಳು ಈ ಭಾರಿ ನಡೆಯದಂತೆ ಪೆÇಲೀಸ್ ಇಲಾಖೆಯವರು ನೋಡಿಕೊಳ್ಳುವುದರ ಜೊತೆಗೆ ಸೂಕ್ತ ಪೆÇಲೀಸ್ ಬಂದೋಬಸ್ತ್ ಒದಗಿಸುವುದರ ಮೂಲಕ ದಂಡಗುಂಡ ಬಸವಣ್ಣನವರ ಜಾತ್ರೆಯ ಯಶಸ್ವಿಗೆ ನಾವೇಲ್ಲರು ಶ್ರಮಿಸೋಣಾ ಎಂದರು.
ಅಳ್ಳೋಳ್ಳಿ ಗ್ರಾಮದಿಂದ ದಂಡಗುಂಡ ಗ್ರಾಮದ ಬಸವಣ್ಣನವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಸ್ತೆಯ ಮೇಲೆ ಎಲ್ಲಿಯೂ ವಾಹನಗಳನ್ನು ನಿಲ್ಲಿಸಬಾರದು. ಒಂದು ವೆಳೆ ನೀವು ವಾಹನಗಳನ್ನು ನಿಲ್ಲಿಸಿ ಲಾಕ್ ಮಾಡಿ ದರ್ಶನ ಪಡೆದುಕೊಳ್ಳಲು ಹೋದರೇ ಸಾಕಷ್ಟು ತೊಂದರೆಯಾಗುತ್ತದೆ. ವಾಹನಗಳು ಎಲ್ಲೇಲ್ಲಿ ನಿಲ್ಲಿಸಬೇಕೆಂದು ನಾವು ಹಾಕಿಕೊಟ್ಟಿರುವ ಪಾಕಿರ್ಂಗ್ ವ್ಯವಸ್ಥೆಯಲ್ಲಿಯೇ ನಿಲ್ಲಿಸಬೇಕು ಎಂದರು.
ದೇವಸ್ಥಾನದ ಗರ್ಭಗುಡಿಯ ಮುಖ್ಯದ್ವಾರವನ್ನು ಹಿಡಿದು 5 ದ್ವಾರಗಳಿವೆ. ಮುಖ್ಯ ದ್ವಾರದಿಂದ ಪ್ರತಿಯೊಬ್ಬರಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುವುದು, ಬಲಗಡೆಯಿಂದ ಮಹಿಳೆಯರಿಗೆ, ಎಡಗಡೆಯಿಂದ ಪುರುಷರಿಗೆ ಅವಕಾಶ ಕೊಡಲಾಗುತ್ತಿದೆ. ಅದರಂತೆ ತಾವುಗಳು ದರ್ಶನ ಪಡೆದುಕೊಂಡು ಹೋಗಲು ಅವಕಾಶ ನೀಡಲಾಗುವುದು. ಪ್ರದಕ್ಷಣಿಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಹೀಗಾಗಿ ಎಲ್ಲರು ಸಹಕರಿಸಬೇಕು ಎಂದರು.
ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು. ಅಂಗಡಿ ಮುಗ್ಗಂಟ್ಟುಗಳು ಸ್ವಲ್ಪ ಒಳಗಡೆ ಹಾಕಬೇಕು. ರಥದ ಗಾಲಿಗಳು ಸುಗಮವಾಗಿ ಹೋಗಲು ಸಹಕರಿಬೇಕು. ಇಲ್ಲದ್ದಿದ್ದರೇ ಅನಾಹುತಗಳು ಸಂಭವಿಸುವ ಘಟನೆಗಳು ಜರುಗುವ ಸಾಧ್ಯತೆಗಳಿರುತ್ತವೆ. ದಾಸೋಹ ಮಾಡುವ ಸ್ಥಳದಲ್ಲೇ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಎಂ.ಎಲ್.ಸಿ, ದೇವಸ್ಥಾನ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಬಿ.ಜಿ ಪಾಟೀಲ್ ಮಾತನಾಡಿ, ಕಳೆದ ವರ್ಷದದಲ್ಲಿ ಪೆÇಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮ ಕೈಗೊಂಡು ಜಾತ್ರೆ ಯಶಸ್ವಿಯಾಗಲು ಸಹಕರಿಸಿದರು. ಅದೇ ರೀತಿ ಈ ವರ್ಷವು ಕೂಡ ಪೆÇಲೀಸ್ ಇಲಾಖೆಯವರು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಗ್ರಾಮದ ಮುಖಂಡರು, ಭಕ್ತರು ಸೇರಿದಂತೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ದೇವಸ್ಥಾನ ಕಮಿಟಿ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ದಂಡಗುಂಡ ಬಸವಣ್ಣನವರ ಜಾತ್ರೆ ವೆಳೆ ಏನೇ ಅಡೆತಡೆಗಳು ಬಂದ್ದರೂ ಕೂಡ ಅದಕ್ಕೆಲ್ಲ ನಾವು ಯಾವುದೇ ರೀತಿಯ ಮಹತ್ವ ನೀಡದೇ, ಜಾತ್ರೆಯ ಯಶಸ್ವಿಗೆ ಸಹಕರಿಸಿದ್ದೇವೆ. ಈ ಬಾರಿಯ ಜಾತ್ರೆಗೆ ಚಿತ್ತಾಪುರ ತಾಲೂಕು ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಮಠಾಧೀಶರು ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ 10 ಗಂಟೆಯ ಒಳಗೆ ಕಳಸಾರೋಹಣದ ಮೂಲಕ ಮೆರವಣಿಗೆ ಮಾಡಲಾಗುತ್ತಿದೆ ಎಂದರು.
ಬಸವಣ್ಣನವರ ಜಾತ್ರೆಗೆ ನಾವು ಅಂದುಕೊಳ್ಳುವುದಕ್ಕಿಂದ ನಿರೀಕ್ಷೆಗೂ ಮೀರಿ ಪ್ರತಿ ವರ್ಷದಂತೆ ಭಕ್ತರ ಸಂಖ್ಯೆ ಹೆಚ್ಚುಗುತ್ತಲೇ ಇದೆ. ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಈಗಾಗಲೇ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಹೀಗಾಗಿ ಪೆÇಲೀಸ್ ಇಲಾಖೆಯವರು ಕೂಡ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸಿಪಿಐ ಎಸ್.ಸಿ ಪಾಟೀಲ್ ಮಾತನಾಡಿ, ಶ್ರಾವಣ ಮಾಸದಲ್ಲಿ ಸ್ವಲ್ಪ ಮಳೆ ಬರುವ ಸಂಭವ ಇರುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ಅಸ್ಥವ್ಯಸ್ಥವಾಗುವ ಸಂಭವ ಇರುತ್ತದೆ. ನಾವು ಅನ್ಕೊಂಡಂತೆ ಬೈಕ್, ಕಾರ್, ಜೀಪ್, ಟ್ರ್ಯಾಕ್ಟರ್, ಬಸ್ ಸೇರಿದಂತೆ ಒಟ್ಟು 8 ರಿಂದ ಹತ್ತು ಸಾವಿರ ವಾಹನಗಳು ಆಗಮಿಸುವ ನೀರಿಕ್ಷೆ ಇದೆ. ಹೀಗಾಗಿ ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ವಾಹನ ಸವಾರರಿಗೆ ಯಾವ ಯಾವ ಸ್ಥಳದಲ್ಲಿ ಪೆÇಲೀಸ್ ಇಲಾಖೆಯಿಂದ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕು. ಬೇಕಾ ಬಿಟ್ಟಿಯಾಗಿ ಸಿಕ್ಕ ಸಿಕ್ಕ ಜಾಗದಲ್ಲಿ ವಾಹನಗಳು ನಿಲ್ಲಿಸಿ ದರ್ಶನ ಪಡೆದುಕೊಳ್ಳಲು ಹೋದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಭಕ್ತರು ಸಹಕರಿಸಬೇಕು ಎಂದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ತಾಲೂಕು ಆಡಳಿತದ ವತಿಯಿಂದ ಭಕ್ತರಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ನಾವೇಲ್ಲರು ಸೇರಿ ಜಾತ್ರೆ ಯಶಸ್ವಿಗೆ ಶ್ರಮಿಸೋಣ, ಜಾತ್ರೆಯಲ್ಲಿ ಯಾವುದೇ ರೀತಿಯ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ವ್ಯವಸ್ಥೆ, ಉಚಿತ ವೈದ್ಯಕೀಯ ಚಿಕಿತ್ಸೆ ಜೊತೆಗೆ ಆಂಬುಲೇಸ್ ವ್ಯವಸ್ಥೆ ಮಾಡಲು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಪಿಎಸ್’ಐ ಮಂಜುನಾಥ ರೆಡ್ಡಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಆ.31 ರಂದು ದಂಡಗುಂಡ ಬಸವಣ್ಣನವರ ಜಾತ್ರೆ ಇರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದು, ಗ್ರಾಮಸ್ಥರು ಹಾಗೂ ಭಕ್ತರು ಕೂಡ ಸಹಕಾರ ನೀಡಬೇಕು ಎಂದರು.
ದೇವಸ್ಥಾನ ಕಮಿಟಿ ಕಾರ್ಯದರ್ಶಿ ಚಂದ್ರಶೇಖರ ಆವಂಟಿ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಮಹಾಂತಗೌಡ, ರಾಜಶೇಖರ ಪಾಟೀಲ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಹಾಗೂ ಭಕ್ತರು ಇದ್ದರು.
ಮಹೇಶ ರೋಮಾಲ್ ನಿರೂಪಿಸಿ, ವಂದಿಸಿದರು.

































