
ಕೆ.ಆರ್.ಪುರ, ಸೆ.೭-ಮಧ್ಯವರ್ತಿಗಳ ಆವಳಿಯಿಂದ ಜನರು ಸಮಯ, ದುಡ್ಡು ಕಳೆದುಕೊಂಡು ಸರ್ಕಾರದ ಅಧಿಕಾರಿಗಳ ಬಗ್ಗೆ ಬೇಸತ್ತುಹೋಗುತ್ತಿದ್ದಾರೆ. ಅಂತಹ ಕೆಲವರಿಂದ ಹಲವರಿಗೆ ತೊಂದರೆಯಾಗ ಬಾರದು ಎಂದು ಏಜೆಂಟ್ ಗಳನ್ನು ಕಡಿವಾಣ ಹಾಕಲೇಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿಗಳು ಪ್ರಜಾಸೇವೆ ಆಂದೋಲನ ನೂತನ ಇಲಾಖೆ ಪರಿಚಯಿಸಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲ್ಲೂಕಿನ ಬಿದರಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ “ಜನರ ಬಾಗಿಲಿಗೆ ಬಂತು ಸರ್ಕಾರ” ಎಂಬ ಯೋಜನೆ ಅಡ್ಡಿಯಲ್ಲಿ ಆರಂಭಿಸಲಾದ ಪ್ರಜಾಸೇವೆ ಆಂದೋಲನ ಸಮಿತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಜನರ ಮನೆ ಬಾಗಿಲಿಗೆ ಬಂತು ಸರ್ಕಾರ” ಎಂಬ ನೂತನ ಯೋಜನೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರಜಾಸೇವಾ ಆಂದೋಲನವನ್ನು ಆರಂಭಿಸಲಾಯಿತು ಎಂದು ಹೇಳಿದರು.
ಈ ಕಾರ್ಯಕ್ರಮ ಪ್ರತಿ ಶನಿವಾರ ನಡೆಯಲಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕಾಗುತ್ತದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ, ಜಿಬಿಎ, ಕಂದಾಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮಾಜಿ ಸಚಿವರು, ಸ್ಥಳೀಯ ಮುಖಂಡರು ಸಾಕ್ಷಿಯಾದರು.
ಇದೆ ವೇಳೆ ಸಚಿವ ಕೃಷ್ಣಭೈರೇಗೌಡರವರು ಜನರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗೆ ಕೊಡಲೆ ಸ್ಪಂದಿಸುವುದಾಗಿ ತಿಳಿಸಿದರು.
ಅರ್ಹ ಪಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಬಾಂಡ್ ಸಹ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಪರಶುರಾಮ್, ಇ.ಓ ಕೆ. ಮಂಜುನಾಥ್, ಜೆ.ಸಿ ಡಾ.ಸುಧಾ ಸ್ವಪ್ನ, ಮಾಜಿ ಸಚಿವ ಹೆಚ್.ನಾಗೇಶ್,ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ ಮೋಹನ್, ಗ್ಯಾರಂಟಿ ಅಧ್ಯಕ್ಷ ಪ್ರಶಾಂತ್,ಭೂನ್ಯಾಯಮಂಡಳಿ ಸದಸ್ಯ ಬಿ.ವಿ ವರುಣ್,ಮುಖಂಡರಾದ ಬಿ.ಡಿ ನಾಗಪ್ಪ, ಎಂ.ಸಿ.ಬಿ ರಾಜಣ್ಣ, ಬಿ.ಕೆ ಚಂದ್ರಶೇಖರ್,ಕೆ.ಕುಮಾರ್,ಚಿಕ್ಕಮುನಿಯಪ್ಪ, ನಾರಾಯಣಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.
































