Home ಜಿಲ್ಲೆ ಕುಂಟೋಜಿ ಬಸವಣ್ಣನ ಜಾತ್ರೆ: ನಾಳೆ ಎರಡನೇ ವರ್ಷದ ರಥೋತ್ಸವ

ಕುಂಟೋಜಿ ಬಸವಣ್ಣನ ಜಾತ್ರೆ: ನಾಳೆ ಎರಡನೇ ವರ್ಷದ ರಥೋತ್ಸವ

ಬಿ.ಎಚ್.ನಲವಡೆ.
ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಕುಂಟೋಜಿ ಬಸವಣ್ಣನ ಜಾತ್ರಾ ಮಹೋತ್ಸವವು ಇಂದಿನಿAದ ಐದು ದಿನಗಳ ಕಾಲ ವಿಜೃಂಭಣೆಯಿAದ ನಡೆಯಲಿದೆ. ಜಾತ್ರೆಯ ಅಂಗವಾಗಿ ನಾಳೆ ಎರಡನೇ ವರ್ಷದ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಲಿವೆ.
ಸುಮಾರು ೧೨೦ ಕಂಬಗಳಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕುಂಟೋಜಿ ಬಸವಣ್ಣ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ಹಿಂದೆ ದಟ್ಟ ಅರಣ್ಯ ಪ್ರದೇಶದಲ್ಲಿದ್ದ ಶಿವನ ದೇವಾಲಯಕ್ಕೆ ಗ್ರಾಮದ ಪೂಜಾರಿ ಪ್ರತಿದಿನ ಬೆಳಿಗ್ಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಆ ದೇವಾಲಯದತ್ತ ಯಾರೂ ತೆರಳದ ಸಂದರ್ಭದಲ್ಲಿ ಒಂದು ದಿನ ಮಧ್ಯಾಹ್ನದ ವೇಳೆ ದೇವಾಲಯದ ಸಮೀಪ ಮಳೆ ಸುರಿದಿದ್ದು, ಮಳೆ ನಿಂತ ನಂತರ ಅಲ್ಲಿನ ತಗ್ಗಿನ ಪ್ರದೇಶದಲ್ಲಿದ್ದ ಕೆಸರಿನಲ್ಲಿ ಮಕ್ಕಳಿಗೆ ಎತ್ತಿನ ಕೊಂಬುಗಳAತಹ ಆಕಾರಗಳು ಕಂಡುಬAದವು ಎನ್ನಲಾಗುತ್ತದೆ. ಈ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೆಲ ಅಗೆದಾಗ ಬಸವಣ್ಣನ ಮೂರ್ತಿ ಪತ್ತೆಯಾಯಿತು ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಶತಮಾನಗಳಿಂದ ಪೂಜಿಸಿಕೊಂಡು ಬಂದಿರುವ ಈ ಬಸವಣ್ಣನಿಗೆ ಕಳೆದ ವರ್ಷ ಭಕ್ತರೆಲ್ಲರೂ ಸೇರಿ ಕಟ್ಟಿಗೆಯ ತೇರು ನಿರ್ಮಿಸಿ ರಥೋತ್ಸವ ನಡೆಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಹರಗುರು ಚರಮೂರ್ತಿಗಳನ್ನು ಆಹ್ವಾನಿಸಿ ಅವರ ಅಮೃತ ಹಸ್ತದಿಂದ ಪ್ರಥಮ ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ದೂರದ ಊರುಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಆರಾಧ್ಯ ದೈವದ ದರ್ಶನ ಪಡೆದು ಕೃತಾರ್ಥರಾಗಿದ್ದರು.
ಈ ವರ್ಷ ಎರಡನೇ ವರ್ಷದ ರಥೋತ್ಸವದ ಸಂಭ್ರಮದಲ್ಲಿರುವ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ ದೊರೆಯಲಿದೆ. ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು ಮುಂಜಾನೆ ಮಹಾಪೂಜೆ ಹಾಗೂ ರುದ್ರಾಭಿಷೇಕ ನೆರವೇರಲಿದೆ. ನಂತರ ಭಕ್ತರ ದರ್ಶನಕ್ಕಾಗಿ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಬೆಳಗ್ಗೆಯಿಂದಲೇ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ೩ ಗಂಟೆಗೆ ಪಲ್ಲಕ್ಕಿ ಹಾಗೂ ಕಳಸದ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಕೊಣ್ಣೂರಿನ ಕನಕಶ್ರೀ ಮಹಿಳಾ ಡೊಳ್ಳು ತಂಡದಿAದ ಡೊಳ್ಳು ಕುಣಿತ ಹಾಗೂ ಕುದುರೆ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ. ಕುಂಟೋಜಿಯ ಸಿದ್ಧಿವಿನಾಯಕ ಕೋಲಾಟ ತಂಡ, ಕೋಲಾಟ, ಕರಡಿಮಜಲು ಸೇರಿದಂತೆ ವಿವಿಧ ವಾದ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ರಾತ್ರಿ ೧೦ ಗಂಟೆಗೆ ದೇವಸ್ಥಾನದ ಶಿಖರದಲ್ಲಿ ಕಳಸಾರೋಹಣ ಕಾರ್ಯಕ್ರಮ ನಡೆಯಲಿದ್ದು, ನಂತರ ರಾತ್ರಿ ಮದ್ದು ಸುಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದೇ ರಾತ್ರಿ ೧೦.೩೦ಕ್ಕೆ ನಾಲತವಾಡದ ಶ್ರೀ ಸಿದ್ದು ನಾಲತವಾಡ ಅವರ ಕಲಾ ತಂಡ ಹಾಗೂ ಶ್ರೀ ವೀರೇಶ್ವರ ನಾಟ್ಯ ಸಂಘದ ವತಿಯಿಂದ ಬಂಜೆ ತೊಟ್ಟಿಲು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕುಂಟೋಜಿ ಭಾವೈಕ್ಯತಾ ಮಠದ ಶ್ರೀ ಚನ್ನವೀರ ಶಿವಾಚಾರ್ಯರು ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕುಂಟೋಜಿ ಶ್ರೀ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಸಯ್ಯ ಸ್ವಾಮಿ ಅಬ್ಬಿಹಾಳಮಠ, ರುದ್ರಯ್ಯ ಮಠ, ಕಾಮರಾಜ ಬಿರಾದಾರ, ಎಸ್.ಐ.ಗೂಳಿ, ಸತೀಶ ಓಸವಾಳ, ಸಿ.ಬಿ. ಅಸ್ಕಿ, ಸಂಗನಗೌಡ ಪಾಟೀಲ, ಶಿವಲಿಂಗಪ್ಪ ಗುಸ್ತಿಗಾರ, ಪ್ರಕಾಶ ಇಲ್ಲೂರ, ಬಿ.ಎಸ್. ಹೂಗಾರ, ಯಲ್ಲಪ್ಪ ಪಾಟೀಲ, ಶಿವಕುಮಾರ ಮುರಾಳ, ಅರವಿಂದ ಕವಲಗಿ, ರಾಮನಗೌಡ ಹಂಪನಗೌಡರ, ಪಿ.ಕೆ. ಹೂಗಾರ, ಅಮರಪ್ಪ ಹಂಪನಗೌಡರ, ಸಂಗಣ್ಣ ಡಮನಾಳ, ಕಲ್ಪನಾ ದೇಸಾಯಿ, ಶಿವಾನಂದ ಬಿರಾದಾರ, ಸದಾಶಿವ ಹೊಸಮನಿ, ಜೆ.ವಿ.ಕೊಳೂರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಧಾರ್ಮಿಕ, ಸಾಂಸ್ಕöÈತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕುಂಟೋಜಿ ಬಸವಣ್ಣನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಕಮಿಟಿ ಹಾಗೂ ಜಾತ್ರಾ ಮಹೋತ್ಸವದ ಆಯೋಜಕರು ಈ ಮೂಲಕ ಮನವಿ ಮಾಡಿದ್ದಾರೆ.