Home ಜಿಲ್ಲೆ ಬೆಂಗಳೂರು ಕೀಲುಕೋಟೆಯಲ್ಲಿ ಕೃಷ್ಣನ ಪಲ್ಲಕ್ಕಿ ಉತ್ಸವ

ಕೀಲುಕೋಟೆಯಲ್ಲಿ ಕೃಷ್ಣನ ಪಲ್ಲಕ್ಕಿ ಉತ್ಸವ

ಕೋಲಾರ,ಸೆ,೮- ತ್ರೈತಸಿದ್ಧಾಂತ ಅಡಿಯಲ್ಲಿ ಪ್ರಬೋಧ ಸೇವಾ ಸಮಿತಿ ಮತ್ತು ಇಂದೂಜ್ಞಾನ ವೇದಿಕೆ ಸಮಿತಿಯ ವತಿಯಿಂದ ನಾಲ್ಕು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ನಾಲ್ಕನೇ ದಿನವಾದ ಸೋಮವಾರ ಪ್ರಮುಖ ಹಾದಿ ಬೀದಿಗಳಲ್ಲಿ ಕೋಲಾಟ ಮತ್ತು ತಲಾ ತಂಡಗಳೊಂದಿಗೆ ಶ್ರೀ ಕೃಷ್ಣ ಪಲ್ಲಕ್ಕಿ ಉತ್ಸವ ನಡೆಯಿತು.


ನಗರದ ಕೀಲುಕೋಟೆಯಲ್ಲಿ ಪ್ರಬೋಧ ಸೇವಾ ಸಮಿತಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಅದ್ದೂರಿಯಾಗಿ ನಡೆಸಿದ್ದು, ಕೊನೆ ದಿನ ಭಗವದ್ಗೀತಾ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ನಾಗರಿಕರು ಭಕ್ತಾದಿಗಳು ಹಾಗೂ ಪ್ರಬೋಧ ಸೇವಾ ಸಮಿತಿಯ ಬೆಂಗಳೂರು ಕುಪ್ಪಂ ಬಂಗಾರು ಪಾಳ್ಯ ಮುಳಬಾಗಿಲು ನೆಲಮಂಗಲ ವಿಕೋಟ ಇತ್ಯಾದಿ ಪ್ರಾಂತ್ಯದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.


ಮೊದಲನೇ ದಿನ ಊರಿನ ಗ್ರಾಮಸ್ಥರು ಭಕ್ತಾದಿಗಳು ಆಧ್ಯಾತ್ಮಿಕ ಪ್ರಿಯರು ಜ್ಞಾನ ಜಿಜ್ಞಾಸುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಂದಂತಹ ಮಹಿಳೆಯರಿಗೆ ಅರಿಶಿನ ಕುಂಕುಮ ಮತ್ತು ದೈವ ಗ್ರಂಥ ಸೇವ ರೂಪದಲ್ಲಿ ಕೊಡಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮಿ ಕಾರ್ಯಕ್ರಮಕ್ಕೆ ಭೇಟಿಕೊಟ್ಟು ಪೂಜೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶಿಷ್ಟತೆ ಗೀತೆಯ ಮಹತ್ವದ ಬಗ್ಗೆ ಬಂದಂತಹ ಭಕ್ತಾದಿಗಳಿಗೆ ಉಪನ್ಯಾಸ ನೀಡಲಾಯಿತು.


ತ್ರೈತ ಸಿದ್ದಾಂತ ಆದಿಕರ್ತ ಶ್ರೀ ಆಚಾರ್ಯ ಪ್ರಬೋದಾನಂದ ಯೋಗೀಶ್ವರರು ರಚಿಸಿರುವ ಆಧ್ಯಾತ್ಮಿಕ ತ್ರಿಮತ ರಚನೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು, ಭಕ್ತಾದಿಗಳು ಗ್ರಂಥಗಳನ್ನು ನೋಡಿ ಶ್ರದ್ಧಾಪೂರ್ವಕವಾಗಿ ತೆಗೆದುಕೊಂಡರು.


ಕಾರ್ಯಕ್ರಮದಲ್ಲಿ ಕೀಲುಕೋಟೆ ಗ್ರಾಮಸ್ಥರು ಹಾಗೂ ಪ್ರಬೋಧ ಸೇವಾ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಪ್ರಿಯರು, ಜ್ಞಾನ ಜಿಜ್ಞಾಸಿಗಳು, ಭಕ್ತಾದಿಗಳು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.