
ಬೀದರ್ ಅ.22: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ (ಪಿ) ಗ್ರಾಮದಲ್ಲಿ ಪ್ರತಿ ವರ್ಷದಂತೆಯೂ ಈ ವರ್ಷವೂ ಸಡಗರ, ಸಂಭ್ರಮದಿಂದ ಸಾಂಪ್ರದಾಯಿಕ ದಸರಾ ಹಬ್ಬವನ್ನು ಆಚರಿಸಲಾಯಿತು.
ಖಾಶೆಂಪುರ್ (ಪಾನ್) ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮಂಗಳವಾರ ಸಂಜೆ ನಡೆದ ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಅದೇ ಗ್ರಾಮದವರು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿ ಕೂಡ ಭಾಜಾ ಭಜಂತ್ರಿಗಳೊಂದಿಗೆ ಗ್ರಾಮದ ಹಿರಿಯರು, ಮಹಾರಾಜರ ಸಮ್ಮುಖದಲ್ಲಿ ಮಾಜಿ ಸಚಿವ ಬಂಡೆಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ಊರ ಹತ್ತಿರದ ಬನ್ನಿ ಮರಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಬಳಿಕ ಬನ್ನಿ ತೆಗೆದುಕೊಂಡು ಬಂದ ಗ್ರಾಮಸ್ಥರು, ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಬನ್ನಿ ಅರ್ಪಿಸಿದರು. ಇದೇ ವೇಳೆ ಗ್ರಾಮಸ್ಥರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭ ಕೋರಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ನಾಡ ಹಬ್ಬ ದಸರಾವನ್ನು ನಾಡಿನೆಲ್ಲಡೇ ಆಚರಿಸಲಾಗುತ್ತದೆ. ಅದರಂತೆಯೇ ನಮ್ಮ ಗ್ರಾಮದಲ್ಲಿ ಕೂಡ ಸಡಗರ ಸಂಭ್ರಮದಿಂದ ದಸರಾ ಆಚರಣೆ ಮಾಡುತ್ತೇವೆ ಎಂದರು.
ಪ್ರತಿ ವರ್ಷದ ಸಂಪ್ರದಾಯದಂತೆ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಣೆ ಮಾಡಲಾಗಿದೆ. ಗ್ರಾಮದ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ, ಜನರ ನೆಮ್ಮದಿಯ ಜೀವನಕ್ಕಾಗಿ ಪ್ರಾರ್ಥಿಸಲಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಖಾಶೆಂಪುರ್ ಪಿ ಗ್ರಾಮದ ಹಿರಿಯರಾದ ಡಾ. ಮಾತಾರ್ಂಡರಾವ್ ಶ್ರೀನಿವಾಸರಾವ್ ಖಾಶೆಂಪುರ್, ರಾಜು ಶ್ರೀನಿವಾಸರಾವ್ ಖಾಶೆಂಪುರ್, ರಾಜಕುಮಾರ್ ಪೆÇಲೀಸ್ ಪಾಟೀಲ್, ರಾಜು ಖಾಶೆಂಪುರ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಇದ್ದರು.























