ಕೋಲಾರ,ಜು,೩- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಬಂಧಿಕರೊಬ್ಬರ ಸಾವಿನ ಹಿನ್ನಲೆ ಅಂತಿಮ ದರ್ಶನಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇಲ್ಲಿಗೆ ಬಂದರೂ ಜಿಲ್ಲೆಯ ಯಾವೊಬ್ಬ ಶಾಸಕರೂ ಅವರನ್ನು ಸ್ವಾಗತಿಸಲು ಇತ್ತ ಸುಳಿಯದಿರುವುದು ಆಶ್ಚರ್ಯಕ್ಕೆಡೆ ಮಾಡಿಕೊಟ್ಟಿತು.
ಖರ್ಗೆಯವರ ಬೀಗರು ಮತ್ತು ಮಗಳ ಅತ್ತೆ ಜಗದಾಂಬ ಎಂಬುವವರು ಇಲ್ಲಿನ ಸಿ.ಬೈರೇಗೌಡ ನಗರದ ನಿವಾಸದಲ್ಲಿ ವಿಧಿವಶರಾಗಿದ್ದು, ಅಂತಿಮ ದರ್ಶನಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಆಗಮಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಕ್ರಿವಾಲ್, ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳಾ, ಎಸಿ ಜಂಬಗಿ, ತಹಸೀಲ್ದಾರ್ ಶ್ರೀನಿವಾಸ್ ಸೇರಿದಂತೆ ಹಿರಿಯ ಅಧಿಕಾರಗಳು ಹಾಜರಿದ್ದು, ಬರಮಾಡಿಕೊಂಡು ಶಿಷ್ಟಾಚಾರ ಪಾಲಿಸಿದರು.
ಮೃತದೇಹಕ್ಕೆ ಪುಷ್ಪನಮನ ಸಲ್ಲಿಸಿದ ಖರ್ಗೆಯವರೊಂದಿಗೆ ಆನೇಕಲ್ ಶಾಸಕ ಶಿವಣ್ಣ, ಎಸಿಪಿ ಸುಧಾಕರ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಡಾ.ಗೋವಿಂದರಾಜು, ಮಾಜಿ ಸದಸ್ಯರಾಸ ಎಸ್.ಆರ್.ಮುರಳಿಗೌಡ, ಸೋಮಶೇಖರ್, ಜಿಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಇರಗಸಂದ್ರ ಪ್ರತಾಪ್, ಜೆ.ಶ್ರೀನಿವಾಸ್, ಕೆಜಿಎಫ್ ಕಾರ್ತಿಕ್, ಜಯಪಾಲ್, ಮುಖಂಡರಾದ ಎಂ.ನಾರಾಯಾಣ್, ಜಗನ್ನಾಥ್,ವೆಂಕಟಪತಿ, ಹರೀಶ್, ಚಂದ್ರಮೌಳಿ, ದಲಿತನಾರಾಯಣಸ್ವಾಮಿ ಮತ್ತಿತರರು ಖರ್ಗೆಯವರು ಅಂತಿಮ ದರ್ಶನ ಪಡೆದು ಹೊರಡುವವರೆಗೂ ಜತೆಯಲ್ಲೇ ಇದ್ದರು.
ಜನಪ್ರತಿನಿಧಿಗಳಿಗೆ ಮಾಹಿತಿ ಕೊರತೆ-
ಖರ್ಗೆಯವರ ಭೇಟಿ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಜಿಲ್ಲೆಯ ಯಾವ ಶಾಸಕರಿಗೆ ಅಗಲಿ ವಿಧಾನ ಪರಿಷತ್ ಶಾಸಕರಿಗೆ ಅಗಲಿ ಜನಪ್ರತಿನಿದಿಗಳಿಗೆ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಗೈರು ಹಾಜರಾಗಿದ್ದು ಕಂಡು ಬಂದಿತು.
ಎ.ಐ.ಸಿ.ಸಿ. ಅಧ್ಯಕ್ಷರ ಭೇಟಿಯನ್ನು ಖರ್ಗೆಯವರ ಕಾರ್ಯದರ್ಶಿಗಳು ಕೆ.ಪಿ.ಸಿ.ಸಿ. ಮೂಲಕ ಪಕ್ಷದ ಶಾಸಕರಿಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಕನಿಷ್ಟ ಪಕ್ಷ ಜಿಲ್ಲಾ ಮಟ್ಟದ ಅಧಿಕಾರಿಗಳಾದರೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಲ್ಲಿ ನಿರ್ಲಕ್ಷ ವಹಿಸಿರುವುದು ಆಕ್ಮಸಿಕವೂ ? ಅಥಾವ ಉದ್ದೇಶ ಪೂರ್ವಕ ಎಂಬುದು ಕಾಂಗ್ರೆಸ್ ಮುಖಂಡರಿಗೆ ಯಕ್ಷ ಪ್ರಶ್ನೆಯಾಗಿದೆ.
































