
ಕೆಂಭಾವಿ:ಕೆಂಭಾವಿ ಪಟ್ಟಣ ತನ್ನದೆ ಆದ ವಿಶಿಷ್ಠ ಇತಿಹಾಸವುಳ್ಳ ಪಟ್ಟಣವಾಗಿದ್ದು ಇಲ್ಲಿ ನಡೆಯುವ ಪ್ರತಿಯೊಂದು ಸಂಸ್ಕಾರಯುತ ಕಾರ್ಯಕ್ರಮಗಳು ಜನತೆಯ ಮನಮುಟ್ಟುವಂತೆ ಇರುತ್ತವೆ ಎಂದು ಕೆ.ವೈ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ ಹೇಳಿದರು.
ದಸರಾ ಉತ್ಸವ ಸಮಿತಿಯಿಂದ ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 6 ನೇ ವರ್ಷದ ದಸರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿರುವ ಪುರಾತನ ದೇವಸ್ಥಾನಗಳು, ಇಲ್ಲಿಯ ಸಂಸ್ಕøತಿಯನ್ನು ಸಾರಿ ಹೇಳುತ್ತಿವೆ. ದಾಸರು, ಸಾಹಿತಿಗಳು, ಕವಿಗಳು, ಶರಣರು, ಸಂತರು ಇಲ್ಲಿ ಜನಿಸಿದ್ದು ಅಣ್ಣ ಭೋಗಣ್ಣನ ದೇವಸ್ಥಾನ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದರು. ಪ್ರತಿವರ್ಷ ದಸರಾ ಉತ್ಸವ ಸಮಿತಿಯರು ಹಮ್ಮಿಕೊಳ್ಳುತ್ತಿರುವ ಈ ಅದ್ಭುತ ಕಾರ್ಯಕ್ರಮ ಕೇವಲ ಕಾರ್ಯಕ್ರಮವಾಗಿರದೆ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿಶಿಷ್ಠ ದಸರಾ ಆಚರಣೆ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದ ಅವರು ಪ್ರತಿವರ್ಷ ಈ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ರೂ. 50 ಸಾವಿರ ನೀಡುವುದಾಗಿ ಕಳೆದ ವರ್ಷ ಘೋಷಣೆ ಮಾಡಿದ್ದು ಈ ಬಾರಿ ಅದನ್ನು ಉತ್ಸವ ಸಮಿತಿಗೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಮಾತನಾಡಿ, ಈ ದಸರಾ ಉತ್ಸವ ಕೇವಲ ಆಚರಣೆ ಆಗದೆ ನಾಡಿನ ಸಾಂಸ್ಕೃತಿಕ ವೈಭವದ ಅನಾವರಣವಾಗಿದೆ. ನಾಡಿನ ಪರಂಪರೆ, ಕಲೆ, ಸಾಹಿತ್ಯ, ದುಷ್ಟರ ವಿರುದ್ಧ ಶಿಷ್ಟರಿಗೆ ಜಯ, ಅಹಂಕಾರದ ವಿರುದ್ಧ ಸಹನೆಗೆ ಜಯ, ಸುಳ್ಳಿನ ವಿರುದ್ಧ ಸತ್ಯಕ್ಕೆ ಜಯ ಈ ಎಲ್ಲ ಅನಂತ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ದಸರಾ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಹಬ್ಬವಾಗಿದೆ ಎಂದರು. ಪ್ರತಿವರ್ಷ ಇಲ್ಲಿನ ಯುವಪಡೆ ಇಂತಹ ಅನೇಕ ಕಾರ್ಯಕ್ರಮಗಳನ್ನು ಉತ್ಸವ ಸಮಿತಿ ವತಿಯಿಂದ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು. ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪೂರ ಮಾತನಾಡಿದರು.
ಹಿರೇಮಠದ ಷ.ಬ್ರ. ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ, ಜಿಪಂ ಮಾಜಿ ಸದಸ್ಯ ಲಿಂಗನಗೌಡ ಮಾಲಿಪಾಟೀಲ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೆÇಲೀಸ್ ಪಾಟೀಲ ನಾಡದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರಸಭೆ ಅಧ್ಯಕ್ಷೆ ಗಿರಿಜಾ ಕೊಡಗಾನೂರ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ, ಕೆ.ವೈ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಚಿಂಚೋಳಿ, ಪಿಎಸ್ಐ ಸುವರ್ಣ ಮಲಶೆಟ್ಟಿ, ಪುರಸಭೆ ಸದಸ್ಯ ರವಿ ಸೊನ್ನದ, ಶರಣಬಸ್ಸು (ಕಾಕಾ) ಡಿಗ್ಗಾವಿ, ಅಬ್ದುಲ ರಜಾಕ್ ನಾಲತವಾಡ, ತೋಟಪ್ಪ ಅರಕೇರಿ, ಗುರುಮೂರ್ತಿ ಪತ್ತಾರ, ಪ್ರಕಾಶ ಪಾಟೀಲ, ಅನೀಲ ಗುತ್ತೇದಾರ ಇದ್ದರು. ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು, ಸೂಗೂರಯ್ಯ ಇಂಡಿ ಸ್ವಾಗತಿಸಿದರು, ಪರಶುರಾಮ ನಾರಾಯಣಕರ ವಂದಿಸಿದರು. ನಂತರ ಲಕ್ಷ್ಮಣ ಬೀಳಗಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು.
ದಸರಾ ಉತ್ಸವ ಸಮಿತಿಯ ಪ್ರಶಸ್ತಿ ಪುರಸ್ಕೃತರು-ಮೋಹನರೆಡ್ಡಿ ಡಿಗ್ಗಾವಿ (ವರ್ಷದ ವಿಶೇಷ ವ್ಯಕ್ತಿ), ದಾದಾಪೀರ ಇನಾಮದಾರ, ಶ್ರೀಕಾಂತ ಯಲಗೋಡ, ಮಡಿವಾಳಪ್ಪಗೌಡ ಬಿರಾದಾರ, ಶರಣಮ್ಮ ಹೊಸಮನಿ (ಆದರ್ಶ ಶಿಕ್ಷಕ), ಯಲ್ಲಪ್ಪ ಕವಾಲ್ದಾರ (ಉತ್ತಮ ಕೃಷಿಕ), ಮಂಜುನಾಥ ತಳವಾರ (ಸೇವಾ ಸರ್ವೋತ್ತಮ), ಡಾ. ಸಂತೋಷ ಆಲಗೂರ, ಸುರೇಶ ಮಾಳಗೆ, ರೇವಣಸಿದ್ದಯ್ಯ ಮಠ (ವಿಶೇಷ ಸನ್ಮಾನ) ಪ್ರಶಸ್ತಿಯನ್ನು ಗೌರವಸಿಲಾಯಿತು..






















