
ಕಲಬುರಗಿ: ಸಂಗೀತವೇ ಜೀವನ, ಗಾನವೇ ಆನಂದ ಎಂಬ ಧ್ಯೇಯದೊಂದಿಗೆ ಅ. ೨೫ರಂದು ಕರೋಕೆ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಕನ್ನಡ ಭವನದಲ್ಲಿ ಭಾನುವಾರ ಸಂಜೆ ರಿಂದ ೫ ರಾತ್ರಿ ೧೦-೩೦ ಗಂಟೆಯವರೆಗೆ ನಂದಿನಿ ಸ್ವಾಮಿ ಮ್ಯೂಸಿಕಲ್ ಗ್ರೂಪ್ ಹಾಗೂ ನಂದಿನಿ ಸ್ವಾಮಿ ಕರೋಕೆ ಸ್ಟುಡಿಯೊ ವತಿಯಿಂದ ಕಾರ್ಯಕ್ರಮ ನಡೆಯಲಿದೆ.
ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯ ವಹಿಸುವರು. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ನಾಯಕ ನೀಲಕಂಠ ಮುಲಗೆ, ಕಾಂಗ್ರೆಸ್ ನಾಯಕ ಖಲೀಲ್ ಖಾನ್ ಸಾಹೇಬ್, ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ್, ಸಿವಿಲ್ ಇಂಜಿನಿಯರ್ ಅನಿಲಕುಮಾರ ಎಸ್. ಗಂಗಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ, ಹಿರಿಯ ನ್ಯಾಯವಾದಿ ವಿನೋದಕುಮಾರ ಜೆನವೇರಿ, ಬಿಜೆಪಿ ನಾಯಕ ರೇವಣಸಿದ್ದಪ್ಪ ಭೂಸನೂರ ಹಾಗೂ ಬೆಂಗಳೂರಿನ
ಕೆಸಿಪಿಸಿಇ ಸದಸ್ಯ ಈ. ಆರ್. ಮುರಳೀಧರ ಜಿ. ಕರಲಗಿಕರ್ ಪಾಲ್ಗೊಳ್ಳಲಿದ್ದಾರೆ.
ಸಂಗೀತಾಸಕ್ತರಿಗೆ ಇಂಪಾದ ಗೀತೆಗಳನ್ನು ಆಲಿಸುವ ಅವಕಾಶ ಕಲ್ಪಿಸುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಕಾರ್ಯಕ್ರಮ ಆಯೋಜಕರಾದ ಹೈಕೋರ್ಟ ನ್ಯಾಯವಾದಿ ಜಯನಂದಯ್ಯ ಸ್ವಾಮಿ ಅವರು
ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೪೪೯೬೮೯೮೮೧, ೯೦೩೬೫೫೬೪೧೨ ಸಂಪರ್ಕಿಸಬಹುದು.


























