Home ಜಿಲ್ಲೆ ಬೆಂಗಳೂರು ಆರ್‌ಎಸ್‌ಎಸ್‌ಗೆ ನೋಂದಣಿ ಭಯ

ಆರ್‌ಎಸ್‌ಎಸ್‌ಗೆ ನೋಂದಣಿ ಭಯ

ಬೆಂಗಳೂರು, ಅ. ೨೫: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿ ಆಗದಿರುವ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಗೃಹ ಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್ ಎಲ್ಲಕ್ಕಿಂತ ಹೆಚ್ಚಾಗಿ ನೋದಾಯಿತ ಎಂಬ ಚಿಹ್ನೆಗೆ ಭಯ ಪಡುತ್ತದೆ ಎಂದು ಕುಟುಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು ನೋಂದಣಿಗೆ ಆರ್‌ಎಸ್‌ಎಸ್ ಭಯಪಡುತ್ತದೆ ಏಕೆಂದರೆ, ಅಧಿಕೃತ ನೋಂದಣಿಯಾದರೆ ಕಾನೂನು ಪರಿಶೀಲನೆ, ಹಣಕಾಸಿನ ವಿವರಗಳ ಬಹಿರಂಗಪಡಿಸುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅನಿವಾರ್ಯವಾಗುತ್ತವೆ ಎಂದವರು ವ್ಯಂಗ್ಯವಾಡಿದ್ದಾರೆ.


ಆರ್ ಎಸ್ ಎಸ್ ಗೆ ಹಣ ಎಲ್ಲಿಂದ ಬರುತ್ತದೆ ಯಾವುದಕ್ಕೆ ಖರ್ಚು ಮಾಡುತ್ತದೆ ಯಾರು ಆಡಿಟ್ ಮಾಡುತ್ತಾರೆ ಎಲ್ಲವೂ ಗೊತ್ತಾಗಬೇಕೀದೆ ಹಾಗಾಗಿ ಆರ್ ಎಸ್ ಎಸ್ ತನ್ನ ಹಣದ ಮೂಲ ಖರ್ಚು ಎಲ್ಲವನ್ನು ಸಾರ್ವಜನಿಕ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.


ಸದಾ ಒಂದಿಲ್ಲ ಒಂದು ವಿಚಾರವನ್ನು ಮುಂದಿಟ್ಟುಕೊಂಡು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಗೃಹ ಸಚಿವರು ಎರಡು ದಿನಗಳ ಹಿಂದೆ ಇಷ್ಟೇ ಎರಡು ಮೂರು ದಿನಗಳ ಹಿಂದೆ ಎಷ್ಟೇ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ಪಡೆಯಲೇಬೇಕು ಬರೀ ಮಾಹಿತಿ ನೀಡಿದರೆ ಸಾಲದು ಎಂದು ಹೇಳಿದ್ದರು ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿ ಬಿಜೆಪಿ ನಾಯಕರು ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು